Kannada NewsKarnataka News

*ಹೆಡ್ ಕಾನ್ಸ್ ಟೇಬಲ್ ನಿಂದ ಮೀಟರ್ ಬಡ್ಡಿ ದಂಧೆ: ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಮೀಟರ್ ಬಡ್ಡಿ ದಂಧೆಗೆ ಕಡಿವಾಣಹಾಕಬೇಕಾದ ಪೊಲೀಸಪನೇ ಬಡ್ಡಿ ದಂಧೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹೆಡ್ ಕಾನ್ಸ್ ಟೇಬಲ್ ಓರ್ವನ ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಎಸ್ ಪಿ ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅರುಣ್ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ತನ್ವೀರ್ ಎಂಬುವವರು ಅರುಣ್ ನಿಂದ 80 ಸಾವಿರ ರೂಪಾಯಿ ಸಾಲ ಪಡೆದಿದ್ದರಂತೆ. ಎರಡು ವರ್ಷಗಳ ಹಿಂದೆ ಕೋಳಿ ಅಂಗಡಿಗಾಗಿ ಸಾಲ ಪಡೆದಿದ್ದರಂತೆ.

2 ಲಕ್ಷ ರೂಪಾಯಿ ಬಡ್ಡಿ ಕಟ್ಟಿದರೂ ಬಿಡದೇ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ. 80 ಸಾವಿರ ರೂಪಾಯಿ ಸಾಲಕ್ಕೆ ವಾರಕ್ಕೆ 7000 ರೂಪಾಯಿ ಬಡ್ಡಿ ವಸೂಲಿ ಮಾಡಿದ್ದಾರಂತೆ. ತಿಂಗಳಿಗೆ 28 ಸಾವಿರ ರೂಪಾಯಿ ಬಡ್ಡಿ ಕಟ್ಟಿ ಹೈರಾಣಾಗಿದ್ದ ತನ್ವೀರ್ ಬಡ್ಡಿ ಕಟ್ಟಲೆಂದೇ ಹಲವರಿಂದ ೫ ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ.

ಎರಡು ವಾರದಿಂದ ಬಡ್ಡಿ ಕಟ್ಟದ ಕಾರಣಕ್ಕೆ ಹೆಡ್ ಕಾನ್ಸ್ ಟೇಬಲ್ ಅರುಣ್ ಕಿರುಕುಳ ನೀಡಿದ್ದರಂತೆ. ಇದರಿಂದ ಬೇಸತ್ತು ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ತನ್ವೀರ್ ಅವರನ್ನು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀಟರ್ ಬಡ್ಡಿ ಆರೋಪ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button