ಪ್ರಗತಿವಾಹಿನಿ ಸುದ್ದಿ : ಸಿಖ್ಖರ್ ಪವಿತ್ರ ಯಾತ್ರಾ ಸ್ಥಳವಾದ ಅಮೃತಸರ ಸ್ವರ್ಣ ಮಂದಿರದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿರುವ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ.
ಶಿರೋಮಣಿ ಅಕಾಲಿದಳದ ಮುಖಂಡ ಸುಖವೀರ್ ಸಿಂಗ್ ಬಾದಲ್ ಜೊತೆಗೆ ಹಲವರು ನಿಂತಿರುವಾಗ ಈ ಕೃತ್ಯ ನಡೆದಿದ್ದು, ಕೂಡಲೇ ಜನರು ಆತನನ್ನು ಸುತ್ತುವರೆದು ಪಿಸ್ತೂಲನ್ನು ಕಸಿದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಲಾಗಿದೆ. ಬಂಧಿತನನ್ನು ನಾರಾಯಣ ಸಿಂಗ್ ಚೌರಾ ಎಂದು ಗುರುತಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ