
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚನ ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿ ನೂತನವಾಗಿ ಪ್ರಾರಂಭಿಸಲಾದ ಮೊಬೈಲ್ (ಸಂಚಾರಿ) ಫಿಜಿಯೊಥೆರಪಿ ಕ್ಲಿನಿಕ್ ಅನ್ನು ಕಾಹೆರ ಕುಲಾಧಿಪತಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಜನಸೇವೆಗೆ ಅರ್ಪಿಸಿದರು.
ಭಾರತದಲ್ಲಿ ಪ್ರಥಮ ಬಾರಿಗೆ ಫಿಜಿಯೋಥೆರಪಿ ಮೊಬೈಲ್ (ಸಂಚಾರಿ) ಕ್ಲಿನಿಕ್ ಅನ್ನು ಪರಿಚಯಿಸಲಾಗಿದ್ದು ಈ ಭಾಗದ ಜನರು ತಮ್ಮ ಮನೆಬಾಗಿಲಿಗೆ ಫಿಜಿಥೆರಪಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೊಳಗಾಗಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಫಿಜಿಯೋಥೆರಪಿಯಿಂದ ವಂಚಿತಗೊಳ್ಳಬಾರದು ಎಂಬ ಸದುದ್ದೇಶದಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಆದ್ದರಿಂದ ಜನರು ನೇರವಾಗಿ ಮನೆಬಾಗಿಲಿಗೆ ವೈದ್ಯರನ್ನು ಕರೆಸಿಕೊಂಡು ಸೇವೆ ಪಡೆಯಬಹುದಾಗಿದೆ. ವೈದ್ಯರು ಸೂಚಿಸಿದಂತೆ ಫಿಜಿಯೊಥೆರಪಿ ಕೇಂದ್ರ ಅಥವಾ ಆಸ್ಪತ್ರೆಗೆ ಅಲೆದಾಡುವದು ತಪ್ಪುತ್ತದೆ.
ಈ ವಾಹನವು ಅತ್ಯಾಧುನಿಕ ಫಿಜಿಯೊಥೆರಪಿಯ ಸೌಲಭ್ಯಗಳನ್ನು ಒಳಗೊಂಡಿದ್ದು, ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿದೆ. ಇನ್ಸ್ಟಿಟ್ಯೂಟ್ ಆಫ್ ಫಿಜಿಯೋಥೆರಪಿಯ ಸುವರ್ಣ ಮಹೋತ್ಸವದ ಅಂಗವಾಗಿ ಈ ಸಂಚಾರಿ ಕ್ಲಿನಿಕ್ ಅನ್ನು ಪ್ರಾರಂಭಿಸಲಾಗಿದೆ.
ಈ ಸಂಧರ್ಭದಲ್ಲಿ ಕಾಹೆರನ ಕುಲಪತಿ ಡಾ. ವಿವೇಕ ಸಾವೋಜಿ, ಕುಲಸಚಿವ ಡಾ. ವಿ ಎ ಕೋಠಿವಾಲೆ, ಡಾ. ಸಂಜೀವಕುಮಾರ, ಡಾ. ಸ್ನೇಹಲ ಧರ‍್ಮಾಯತ, ಡಾ. ವಿಜಯ ಕಾಗೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ