ಪ್ರಗತಿವಾಹಿನಿ ಸುದ್ದಿ, ಡೆಹ್ರಾಡೂನ್: ಭಾರೀ ಪ್ರಮಾಣದ ಭೂ ಕುಸಿತಕ್ಕೆ ಒಳಗಾಗಿ ವಿನಾಶದ ಅಂಚಿನಲ್ಲಿರುವ ಭಾರತದ ಪ್ರಮುಖ ಜ್ಯೋತಿರ್ಲಿಂಗದ ಯಾತ್ರಾ ಸ್ಥಳ ಛತ್ತೀಸ್ ಗಡದ ಜೋಶಿಮಠದಲ್ಲಿ ಮೊದಲ ವಸತಿ ಕಟ್ಟಡ ಕುಸಿತಕ್ಕೊಳಗಾಗಿದೆ.
ಮನೆಯ ಮಾಲೀಕ ದಿನೇಶ್ ಲಾಲ್ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಇಡೀ ಜೋಶಿಮಠ ಭೂ ಕುಸಿತಕ್ಕೆ ಒಳಗಾಗಿ ಅಪಾಯದ ಸುಳಿವು ಪಡೆದ ಅನೇಕ ಕುಟುಂಬದವರು ಸ್ಥಳಾಂತರಗೊಂಡಿದ್ದಾರೆ. ಹಲವಾರು ಮನೆಗಳು ಬಿರುಕು ಬಿಟ್ಟು ಅಪಾಯದ ಸುಳಿವು ನೀಡಿದ್ದವು. ದಿನೇಶ ಲಾಲ್ ಕೂಡ ಜನವರಿ ಮೊದಲ ವಾರದಿಂದ ಸಿಂಗ್ ಧಾರ್‌ನ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅವರ ಮನೆಗೂ ದೊಡ್ಡ ಬಿರುಕುಗಳು ಉಂಟಾಗಿ ಅಪಾಯದ ಅಂಚಿನಲ್ಲಿತ್ತು. ಅದೀಗ ವಿನಾಶದ ಹಾದಿಯಲ್ಲಿರುವ ಜೋಶಿಮಠದಲ್ಲಿ ಕುಸಿದ ಮೊದಲ ಮನೆಯಾಗಿದೆ.
“6-7 ಲಕ್ಷ ರೂ. ಖರ್ಚು ಮಾಡಿ ನಿರ್ಮಿಸಿದ್ದ ನನ್ನ ಮನೆ ಭಾನುವಾರ ಬೆಳಿಗ್ಗೆ ಕುಸಿದಿದೆ. ಆದರೆ, ಆಡಳಿತದ ಯಾವೊಬ್ಬ ಅಧಿಕಾರಿಯೂ ಇದನ್ನು ನೋಡಲು ಬಂದಿಲ್ಲ. ಅದರ ಅಂಗಳವೂ ಕುಸಿದಿದೆ” ಎಂದು ಕಾರ್ಮಿಕ ಲಾಲ್ ಹೇಳಿದರು.
“ನನ್ನ ಸಹೋದರರಿಗೆ ಸೇರಿದ ದನದ ಕೊಟ್ಟಿಗೆ ಮತ್ತು ಇತರ ವಸತಿ ಕಟ್ಟಡಗಳು ಸಹ ದೊಡ್ಡ ಹಾನಿಯನ್ನು ಅನುಭವಿಸಿವೆ. ನಮ್ಮ ಜಾನುವಾರುಗಳಲ್ಲಿ ಕೆಲವನ್ನು ಸಂಬಂಧಿಕರಿಗೆ ನೀಡಿದ್ದೇವೆ, ಇನ್ನು ಕೆಲವನ್ನು ನಾವು ಇರುವ ಪ್ರಾಥಮಿಕ ಶಾಲೆಯ ಬಳಿ ಕಟ್ಟಿ ಹಾಕಿದ್ದೇವೆ’ ಎಂದು ಅವರು ಹೇಳಿದರು.
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ಕುಸಿತವಾಗಿರುವುದನ್ನು ದೃಢಪಡಿಸಿದ್ದಾರೆ. “ಮನೆ ಈಗಾಗಲೇ ಹಾನಿಗೊಳಗಾಗಿದೆ. ಕುಟುಂಬ ಅದನ್ನು ಖಾಲಿ ಮಾಡಿದೆ. ನನಗೆ ತಿಳಿದಂತೆ ಪಟ್ಟಣದಲ್ಲಿ ಬೇರೆ ಯಾವುದೇ ವಸತಿ ಕಟ್ಟಡ ಕುಸಿದಿಲ್ಲ.
ಜೋಶಿಮಠ ಬಚಾವೋ ಸಂಘರ್ಷ ಸಮಿತಿಯ ಸಂಚಾಲಕ ಅತುಲ್ ಸತಿ ಮಾತನಾಡಿ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಸಿಂಗ್ ಧಾರ್ ವಾರ್ಡ್‌ನಲ್ಲಿ ಮನೆ ಕುಸಿದಿದೆ. ಇದು ಕುಸಿದ ಮೊದಲ ವಸತಿ ಕಟ್ಟಡವಾಗಿದೆ. ಈ ಹಿಂದೆ ಹತ್ತಿರದ ದೇವಸ್ಥಾನವೊಂದು ಕುಸಿದು ಬಿದ್ದಿತ್ತು ಎಂದು ತಿಳಿಸಿದ್ದಾರೆ.
ದೇವರ ದಾಸಿಮಯ್ಯನ ಮುದನೂರು. ಪುರಾತನ ವಚನ ಪುರುಷೋತ್ತಮನ ಗುರುತನ್ನು ಉಳಿಸುವ ಬಗೆ ಎಂತೋ ?
https://pragati.taskdun.com/mudanur-of-devara-dasimayya-what-is-the-way-to-save-purushottamas-identity/
ಯಾವುದೇ ವರ್ಗಾವಣೆ /ನಿಯೋಜನೆ ಪ್ರಸ್ತಾವನೆ ಸಲ್ಲಿಸಬೇಡಿ – ಸಿಎಂ ಸೂಚನೆ
https://pragati.taskdun.com/do-not-submit-any-transfer-assignment-proposal-cm/
*ಇಂದಿನ ಮಕ್ಕಳೇ ಭವ್ಯಭಾರತದ ನಿರ್ಮಾತೃರು: ಸಚಿವ ಮುರುಗೇಶ ನಿರಾಣಿ*
https://pragati.taskdun.com/murugesh-niraniprerana-karyagarabilagi-students/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ