ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ಗೂಗಲ್ ಮಾಲೀಕತ್ವದ ಖ್ಯಾತ ಫಿಟ್‌ಬಿಟ್ ಸ್ಮಾರ್ಟ್ವಾಚ್‌ಗಳು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವ ಆತಂಕ ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ಫಿಬಿಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ 10 ಲಕ್ಷ ವಾಚ್‌ಗಳನ್ನು ವಾಪಸ್ ಪಡೆದಿದೆ.
ಹೃದಯ ಬಡಿತ, ರಕ್ತದೊತ್ತಡ ಸೇರಿದಂತೆ ದೇಹದ ಚಟುವಟಿಕೆಗಳನ್ನು ಗುರುತಿಸಬಲ್ಲಿ ಈ ಸ್ಮಾರ್ಟ್ ವಾಚ್‌ಗಳನ್ನು ಫಿಟ್‌ಬಿಟ್ 2020ರಲ್ಲಿ ಬಿಡುಗಡೆ ಮಾಡಿತ್ತು. ಈ ಪೈಕಿ 10 ಲಕ್ಷ ವಾಚ್‌ಗಳು ಅಮೇರಿಕದಲ್ಲಿ ಮಾರಾಟವಾಗಿದ್ದರೆ 6,93000 ವಾಚ್‌ಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ವಿವಿಧ ದೇಶಗಳಲ್ಲಿ ಮಾರಾಟವಾಗಿದ್ದವು.
ಬೆಂಕಿ ಹೊತ್ತಿಕೊಳ್ಳುತ್ತಿದ್ದವು
ಫಿಟ್‌ಬಿಟ್‌ನ ಈ ಸ್ಮಾರ್ಟ್ ವಾಚ್‌ಗಳ ಬ್ಯಾಟರಿ ಇದ್ದಕ್ಕಿದ್ದಂತೆ ಬಿಸಿಯಾಗಿ ವಾಚ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದವು. ಇದರಿಂದ ಅನೇಕರಿಗೆ ಸಣ್ಣ ಪ್ರಮಾಣದಲ್ಲಿ ಸುಟ್ಟ ಗಾಯಗಳೂ ಆಗಿದ್ದವು. ವಾಚ್ ಬಗ್ಗೆ ಹಲವರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಫಿಟ್‌ಬಿಟ್ ತನ್ನ ಸ್ಮಾರ್ಟ್ ವಾಚ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.
15ರ ಬಾಲಕಿಗೆ ಕಿರುಕುಳ ನೀಡಿದ 51ರ ವ್ಯಕ್ತಿ ಜೈಲುಪಾಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ