Kannada NewsKarnataka News

ಸಾತಾರ ಬಳಿ ಅಪಘಾತಕ್ಕೆ ಬೆಳಗಾವಿಯ ಐವರು ಬಲಿ

ಸಾತಾರ ಬಳಿ ಅಪಘಾತಕ್ಕೆ ಬೆಳಗಾವಿಯ ಐವರು ಬಲಿ

ಪ್ರಗತಿವಾಹಿನಿ ಸುದ್ದಿ, ಸಾತಾರ – ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಾತಾರ ಬಳಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಬೆಳಗಾವಿಯ ಐವರು ಸೇರಿ ಒಟ್ಟೂ 6 ಜನರು ಸಾವಿಗೀಡಾಗಿದ್ದಾರೆ.

ಕಳೆದ ರಾತ್ರಿ ಮುಂಬೈಯಿಂದ ಬೆಳಗಾವಿಗೆ ಬರುತ್ತಿದ್ದ ಖಾಸಗಿ ಬಸ್ ಸಾತಾರ ಬಳಿ ಬರುತ್ತಿದ್ದಂತೆ ಟೈರ್ ಸ್ಫೋಟಗೊಂಡಿದೆ. ನಂತರ  ಲಾರಿಗೆ ಹೋಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 6 ಜನರ ಸಾವಿಗಾಡಾದರು. ಅವರಲ್ಲಿ ಬೆಳಗಾವಿಯ ನಾಲ್ವರಿದ್ದಾರೆ.

ಹುಕ್ಕೇರಿಯ ವಿಶ್ವನಾಥ ವಿರೂಪಾಕ್ಷಿ, ಆನಗೋಳದ ಅಬ್ಬಾಸ್ ಕಟಗಿ, ವಡಗಾವಿಯ ರವೀಂದ್ರ ಕರೇಗಾರ್, ಗುಂಡು ಗಾವಡೆ, ಸಚಿನ್ ಪಾಟೀಲ, ಅಶೋಕ ಜುನಗಾರೆ ಮೃತರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button