
ಗುಂಡು ಹಾರಿಸಿಕೊಂಡು ಐವರ ಸಾವು
ಪ್ರಗತಿವಾಹಿನಿ ಸುದ್ದಿ, ಗುಂಡ್ಲುಪೇಟೆ –
ಇಲ್ಲಿಯ ಹೊರ ವಲಯದಲ್ಲಿ 5 ಜನ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಸಾವಿಗೀಡಾಗಿದ್ದಾರೆ.
ಇಂದು ಬೆಳಗಿನಜಾವ ಈ ಪ್ರಕರಣ ಬೆಳಕಿಗೆ ಬಂದಿದೆ. ಪತಿ, ಪತ್ನಿ, ಮಕ್ಕಳು ಆಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಅವರು ಎಲ್ಲಿಂದ ಬಂದಿದ್ದರು? ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಯಾರಾದರೂ ಒಬ್ಬರು ಇತರರಿಗೆ ಗುಂಡು ಹಾರಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.
ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?
ಈ ಕುಟುಂಬ ತಾವು ಮೈಸೂರಿನವರು ಎಂದು ಹೇಳಿಕೊಂಡು ಗುಂಡ್ಲುಪೇಟೆಯ ಲಾಡ್ಜ್ ಒಂದರಲ್ಲಿ ರೂಂ ಪಡೆದಿದ್ದರು. ಆದರೆ ರಾತ್ರಿ ಗುಡ್ಲುಪೇಟೆ ಹೊರವಲಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ಸುಮಾರು 35-40 ವಯಸ್ಸಿನ ಗಂಡಸಿನ ಪಕ್ಕದಲ್ಲಿ ರಿವಾಲ್ವರ್ ಒಂದು ಪತ್ತೆಯಾಗಿದೆ. ಆತ ಇನ್ ಶರ್ಟ್ ಮಾಡಿದ್ದು, ಶ್ರೀಮಂತ ಕುಟುಂಬದಂತೆ ಕಾಣುತ್ತಿದೆ. ಆತ್ಮಹತ್ಯೆಗೆ ಕಾರಣ, ಕುಟುಂಬದ ಹಿನ್ನೆಲೆ ಎಲ್ಲವೂ ತನಿಖೆಯ ನಂತರ ಗೊತ್ತಾಗಬೇಕಿದೆ.
ವೀಡಿಯೋ, ದಾಖಲೆ ಸೃಷ್ಟಿಸಿದ ದಿ ಲಯನ್ ಕಿಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ