Belagavi NewsBelgaum NewsKannada NewsKarnataka News

*ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸೇವೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಕಲಬುರಗಿ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ಟಾರ್ ಏರ್ ಸಂಸ್ಥೆಯಿಂದ ನೂತನ ವಿಮಾನ ಸೇವೆ ಪ್ರಾರಂಭವಾಗಿದೆ.

ಬೆಳಗಾವಿಯಿಂದ ರಸ್ತೆ ಮೂಲಕ ಕಲಬುರಗಿಗೆ ತಲುಪಲು 8 ಗಂಟೆ ಸಮಯ ಬೇಕಾಗುತ್ತಿತ್ತು. ಆದರೆ, ಇದೀಗ ವಿಮಾನವು ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಲಿದೆ.

ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸಂಖ್ಯೆ S5-153 ಸಂಪರ್ಕ ಕಲ್ಪಿಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 2:55 ಕ್ಕೆ ಹೊರಟು ಸಂಜೆ 4:05 ಕ್ಕೆ ತಿರುಪತಿಯಲ್ಲಿ ಇಳಿಯುತ್ತದೆ. ತಿರುಪತಿಯಲ್ಲಿ 20 ನಿಮಿಷಗಳ ಲೇಓವರ್ ಇದೆ. ಅಲ್ಲಿಂದ ಸಂಜೆ 4:30 ಕ್ಕೆ ಹೊರಟು 5:40 ಕ್ಕೆ ಕಲಬುರಗಿ ತಲುಪುತ್ತದೆ.

ಕಲಬುರಗಿಯಿಂದ ಬೆಳಗಾವಿಗೆ ಹಿಂದಿರುಗುವ ವಿಮಾನ ಸಂಖ್ಯೆ S5-127 ಇದೆ. ಇದು ಕಲಬುರಗಿಯಿಂದ ಸಂಜೆ 6:35ಕ್ಕೆ ಹೊರಟು ರಾತ್ರಿ 7:40ಕ್ಕೆ ತಿರುಪತಿಗೆ ಆಗಮಿಸುತ್ತದೆ. 20 ನಿಮಿಷಗಳ ಲೇಓವರ್ ನಂತರ, ತಿರುಪತಿಯಿಂದ ಸಂಜೆ 8:05 ಕ್ಕೆ ಹೊರಟು ರಾತ್ರಿ 8:50 ಕ್ಕೆ ಬೆಳಗಾವಿ ತಲುಪುತ್ತದೆ.

ಪ್ರಯಾಣ ದರ ಪ್ರತಿ ಟಿಕೆಟ್‌ಗೆ 6000 ರೂ. ಇರಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button