
ಪ್ರಗತಿವಾಹಿನಿ ಸುದ್ದಿ : ಬುಧವಾರ ಬೆಳಗ್ಗೆ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಾಹಾರಾಷ್ಟ್ರ ಸರ್ಕಾರದ ಡಿಸಿಎಂ ಸೇರಿದಂತೆ 5 ಜನ ಮೃತಪಟ್ಟಿದ್ದರು. ಇದರ ಬೆನ್ನಲ್ಲೆ ಇಂದು ಬೆಳ್ಳಂ ಬೆಳಗ್ಗೆ ಮತ್ತೊಂದು ವಿಮಾನ ಪತನವಾಗಿರುವ ಮಾಹಿತಿ ಹೊರ ಬಿದ್ದಿದ್ದು,15 ಜನ ದುರ್ಮರಣ ಹೊಂದಿದ್ದಾರೆ.
ಕೊಲಂಬಿಯಾ ವೆನೆಜುವೆಲಾದ ಗಡಿಯಲ್ಲಿ ವಿಮಾನ ದುರಂತ ಸಂಭವಿಸಿದ್ದು, 15 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಸಟೇನಾ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ವಿಮಾನವು ಕುಕುಟಾದಿಂದ ಟೇಕ್ ಆಫ್ ಆಗಿ, ಮಧ್ಯಾಹ್ನ ಓಕಾನಾ ಪ್ರದೇಶದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.
ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ವಿಮಾನ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಇನ್ನು ಕುಕುಟಾ ಪ್ರದೇಶವು ಪರ್ವತ ಶ್ರೇಣಿಯಿಂದ ಕೂಡಿದ್ದು, ಹವಾಮಾನ ವೈಪರೀತ್ಯ ಆಗಿಂದಾಗ್ಗೆ ಬದಲಾಗುತ್ತದೆ. ಇದ್ರಿಂದಾಗಿಯೇ ದುರಂತ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನವನ್ನು ಹುಡುಕಲು ಮತ್ತು ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜನೆ ಮಾಡಿದೆ. ಒಬ್ಬರು ಸಂಸದ ಮತ್ತು ಒಬ್ಬರು ಚುನಾವಣಾ ಅಭ್ಯರ್ಥಿ ವಿಮಾನದಲ್ಲಿದ್ದರು ಎನ್ನಲಾಗಿದೆ.

