Kannada NewsKarnataka NewsLatest
ಪ್ರವಾಹ ಪರಿಸ್ಥಿತಿ, ಮುನ್ನೆಚ್ಚರಿಕೆ ಕ್ರಮ: ಖುದ್ದಾಗಿ ಪರಿಶೀಲನೆ ನಡೆಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಸಾತ್ ನೀಡಿದ ಶ್ರೀಶೈಲ ಜಗದ್ಗುರುಗಳು




ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಚಂದೂರ, ಮಾಂಜರಿ, ಇಂಗಳಿ ಗ್ರಾಮದ ಕೃಷ್ಣಾನದಿ ತೀರದ ಪ್ರದೇಶಗಳಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶ್ರಿಶೈಲ್ ಜದ್ಗುರುಗಳು, ಯಡೂರು ಮಠದ ಶ್ರೀ ಜಗದ್ಗುರು ಡಾ. ಚನ್ನಸಿದ್ದರಾಮ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಜೊತೆ ಭೇಟಿ ನೀಡಿ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿದರು.

ನಂತರ ಸಂಸದ ಜೊಲ್ಲೆ ಹಾಗೂ ಶ್ರಿಶೈಲ್ ಜದ್ಗುರುಗಳು ಲೈಫ್ ಜಾಕೇಟ್ ಧರಿಸಿಕೊಂಡು ಎನ್ ಡಿ ಆರ್ ಆಫ್ ಬೋಟ್ ಮೂಲಕ ಕೃಷ್ಣಾನದಿಯಲ್ಲಿ ಸಂಚರಿಸಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ನಂತರ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲು ಸೂಚನೆಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷ ರಾಹುಲ ದೇಸಾಯಿ ,ಸದಸ್ಯರಾದ ಅಜಯ ಸೂರ್ಯವಂಶಿ, ಮಂಜುನಾಥ ದೊಡ್ಡಮನಿ, ಸಂತೋಷ ಶೇಗನೆ, ಈರಣ್ಣಾ ಅಮ್ಮಣಗಿ, ಪ್ರಕಾಶ ಕೋಕಣೆ, ಅಮರ ಬೋರಗಾಂವೆ, ನವನಾಥ ಚವಾನ, ಸತೀಶ ಪುಠಾಣಿ, ಸಿಪಿಐ ಆರ್,ಆರ್, ಪಾಟೀಲ ಪಿ.ಎಸ್.ಐ ಲಕ್ಷ್ಮಣಪ್ಪ ಆರ್ . ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ