Kannada NewsKarnataka NewsLatest

*ಮಾಜಿ ಸಂಸದನ ಪತ್ನಿಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಕಳ್ಳ ಕೊನೆಗೂ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಕಳ್ಳ ಮಾಜಿ ಸಂಸದರ ಪತ್ನಿಯ ಚಿನ್ನದ ಸರ ಕದ್ದು ಪರಾರಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Home add -Advt

ಬಂಧಿತ ಆರೋಪಿಯನ್ನು ಹಾನಗಲ್ ಮೂಲದ ಪರಶುರಾಮ ಬಸಪ್ಪ ಸಣ್ಮನಿ (30) ಎಂದು ಗುರುತಿಸಲಾಗಿದೆ. ಬಂಧಿತನಿಂದ 37 ಗ್ರಾಂ ಚಿನ್ನದ ಸರ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

ಮಾಜಿ ಸಂಸದ ದೇವರಾಯ ನಾಯ್ಕ್ ಪತ್ನಿ ಗೀತಾ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾಗ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಕಳ್ಳ, ಏಕಾಏಕಿ ಗೀತಾ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಲ್ಲಾಪುರ ನಾಕಾ ಬಳಿ ಸೆ.6ರಂದು ಈ ಘಟನೆ ನಡೆದಿತ್ತು.

ಪ್ರಕರಣ ಸಂಬಂಧ ದೇವರಾಯ ನಾಯ್ಕ್ ಪುತ್ರ ನಾಗರಾಜ್ ನಾಯ್ಕ್ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಿರಸಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Back to top button