ಎಸ್.ಕೆ.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ – 2019
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯು ಬೆಳಗಾವಿ ನಗರದ ಪ್ರತಿಷ್ಥಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. “ಜ್ಙಾನದೊಂದಿಗೆ ವ್ಯಕ್ತಿಯ ವಿಕಾಸ” ದೃಷಿಯನ್ನು ಹೊಂದಿ ಇದು ವಿವಿಧ ತರಗತಿ ಮತ್ತು ಪದವಿ ತರಗತಿಗಳನ್ನು ನಡೆಸುತ್ತಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ದೂರ ದೃಷ್ಟಿಯುಳ್ಳ ಸ್ವಾತಂತ್ರ ಪ್ರಿಯರು, ಶಿಕ್ಷಣ ಪ್ರೇಮಿಗಳೂ ಆದ ಮಹನೀಯರನ್ನು ಸ್ಮರಿಸುವುದಕ್ಕೋಸ್ಕರ 2003 ರಿಂದ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತ ಬರಲಾಗುತ್ತಿದೆ.
ಸಾವಂತವಾಡಿಯ ರಾಣಿ ಪಾರ್ವತಿ ದೇವಿಯವರ ಪ್ರೋತ್ಸಾಹದೊಂದಿಗೆ 1944 ರಲ್ಲಿ ಸಾವಂತವಾಡಿಯಲ್ಲಿ ಸಂಸ್ಥೆಯ ತನ್ನ ಮಹಾವಿದ್ಯಾಲಯವನ್ನು ಪ್ರಾರಂಭಿಸಿತು. 1948 ರಲ್ಲಿ ಈ ವiಹಾವಿದ್ಯಾಲಯವನ್ನು ಬೆಳಗಾವಿಗೆ ವರ್ಗಾಯಿಸಲಾಯಿತು. ಡಾ: ಜಿ.ವ್ಹಿ.ಹೇರೇಕರ, ಅಣ್ಣಾಸಾಹೇಬ ಲಠ್ಠೆ, ವಸಂತರಾವ್ ಹೇರವಾಡಕರ, ಬಾಬುರಾವ್ ಠಾಕೂರ ಈ ಮಹನೀಯರೆಲ್ಲರ ಪರಿಶ್ರಮ ಹಾಗೂ ಕಾಳಜಿಯಿಂದ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಲಾಯಿತು.
ಜಮಖಂಡಿ ಸಂಸ್ಥಾನದ ರಾಜಾ ಸಾಹೇಬ ಪಟವರ್ಧನರ ಬೇಸಿಗೆಯ ಅರಮನೆಯಲ್ಲಿ ಮಹಾವಿದ್ಯಾಲಯವು ತನ್ನ ಕಾರ್ಯವನ್ನು ಪ್ರಾರಂಭಿಸಿತು.
ತದನಂತರದಲ್ಲಿ ಶ್ರೀ. ವೈ.ಕೆ.ಪ್ರಭು, ಚತುರ್ದಾಶ ಶಹಾ, ಎಸ.ಬಿ.ನಾಡಕರ್ಣಿ ಅವರ ದಕ್ಷ ಆಡಳಿತ, ಸೂಕ್ತ ಮಾರ್ಗದರ್ಶನಗಳೊಂದಿಗೆ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತ ನಡೆದಿದೆ. ಇಂದಿನ ದಿನಗಳಲ್ಲಿ ಪ್ರಾಥಾಮಿಕ ಹಂತದಿಂದ ಸ್ನಾತಕೋತ್ತರ ಪದವಿಯವರೆಗೂ ಸಂಸ್ಥೆಯ ಅಡಿಯಲ್ಲಿ ಹದಿನೆಂಟು ಶಿಕ್ಷಣ ವಿಭಾಗಗಳು ಕಾರ್ಯ ನಿರ್ವಹಿಸುತ್ತಲಿವೆ.
ಹೀಗೆ ಸಂಸ್ಥೆಯು ತನ್ನ ಶಿಕ್ಷಣದ ದ್ಯೆಯೋದ್ಯೇಶಗಳನ್ನು ಈಡೇರಿಸುತ್ತ ಜವಾಬ್ಧಾರಿ ನಾಗರಿಕರನ್ನು ಮತ್ತು ಸುಶಿಕ್ಷಿತ ಸಮಾಜವನ್ನು ನಿರ್ಮಿಸುತ್ತ ಬರುತ್ತಿರುವ ಈ ವರ್ಷಕ್ಕೆ 75 ಸಂವತ್ಸರಗಳು ತುಂಬುತ್ತಿರುವ ಹಿನ್ನಲೆಯಲ್ಲಿ ತನ್ನ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಬರುವ ದಿನಾಂಕ 06-08-2019 ಮಂಗಳವಾರದಂದು ಸಂಸ್ಥೆಯು ಪ್ರತೀ ವರ್ಷದಂತೆ ತನ್ನ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಿದ್ದು ಈ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಆರಕ್ಷಕ ಇಲಾಖೆಯ ರಾಷ್ಟ್ರಪತಿ ಪದಕ ವಿಜೇತ, ನಿವೃತ್ತ ಪೋಲೀಸ್ ಮಹಾನಿರೀಕ್ಷಕರಾದ ಶ್ರೀ.ಗೋಪಾಲ .ಬಿ. ಹೊಸೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ. “ ರಾಷ್ಟ್ರ ರಕ್ಷಣೆಯ ಸವಾಲುಗಳಲ್ಲಿ ಶಿಕ್ಷಣ ಹಾಗೂ ಯುವಕರ ಪಾತ್ರ ” ಎಂಬ ವಿಷಯದ ಕುರಿತು ದಿಗ್ದರ್ಶನ ನುಡಿಗಳನ್ನು ಆಡಲಿದ್ದಾರೆ.
ಸಮಾರಂಭದ ಗೌರವ ಅತಿಥಿಗಳಾಗಿ ರಾಜ್‌ಮಾತಾ ರಾಣಿ ಪಾರ್ವತಿ ದೇವಿ ಅವರ ಮೊಮ್ಮಗ ಶ್ರೀಯುತ. ಖೇಮರಾಜ ಸಾವಂತ ಭೋಸಲೆ ಅವರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ವೈಸ್ ಚೇರಮನ್ನರಾದ ಶ್ರೀಯುತ.ಎಸ್.ವ್ಹಿ.ಶಾನಭಾಗ ಅವರು ವಹಿಸಲಿದ್ದಾರೆ.
ಸಮಾರಂಭದಲ್ಲಿ ಎಸ್.ಕೆ.ಇ.ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಸದಸ್ಯರು, ಹಿರಿಯ ನಾಗರಿಕರು, ಶಿಕ್ಷಕ – ಪ್ರಾದ್ಯಾಪಕ ಹಾಗೂ ಬಹು ಸಂಖ್ಯೆಯಲ್ಲಿ ವಿದ್ಯಾರ್ಥಿ ಬಳಗವು ಪಾಲ್ಗೊಳ್ಳಲಿದ್ದು ಸಮಾರಂಭವು ಅದ್ದೂರಿಯಾಗಿ ಜರುಗಲಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ