![](https://pragativahini.com/wp-content/uploads/2025/02/IMG_20250214_113037_650_x_350_pixel.jpg)
ಪ್ರಗತಿವಾಹಿನಿ ಸುದ್ದಿ : ರೌಡಿ ಬಾಗಪ್ಪ ಹರಿಜನನನ್ನು ಭೀಕರವಾಗಿ ಕೊಚ್ಚಿ ಹತ್ಯೆಗೈದಿದ್ದ ಹಂತಕರ ಪೈಕಿ ನಾಲ್ವರನ್ನು ಬಂಧಿಸಲಾಗಿದೆ. ಪ್ರಕಾಶ್ ಲಕ್ಷ್ಮಣ ಮೇಲಿನಕೇರಿ, ರಾಹುಲ್ ಭೀಮಾಶಂಕರ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ರಾಹುಲ್ ತಳಕೇರಿ ಹೊರತು ಪಡಿಸಿ ಮಿಕ್ಕ ಯಾರೂ ಸಹ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.
ಆಸ್ತಿ ವಿಚಾರವಾಗಿ ಈ ಹಿಂದೆ ರವಿ ಹಾಗೂ ಭಾಗಪ್ಪ ನಡುವೆ ವ್ಯಾಜ್ಯ ಉಂಟಾಗಿತ್ತು. ಬಾಗಪ್ಪನ ಕಡೆಯ ರೌಡಿಗಳು ರವಿಯನ್ನು ಹತ್ಯೆ ಮಾಡಿದ್ದರು. ಈ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ರವಿಯ ತಮ್ಮ ಪ್ರಕಾಶ ಮೇಲಿನಕೇರಿ ಬಾಗಪ್ಪನನ್ನು ಹತ್ಯೆಗೈದಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 2024 ರಲ್ಲಿ ವಕೀಲ ರವಿಯ ಮೇಲೆ ಕಾರು ಹತ್ತಿಸಿ ಹತ್ಯೆಗೈದಿದ್ದ ದುಷ್ಕರ್ಮಿಗಳು ಶವವನ್ನು 2-3 ಕಿಮೀ ಎಳೆದೊಯ್ದು ಅಮಾನವೀಯತೆ ಮೆರೆದಿದ್ದರು.
ಫೆ. 11 ರಂದು ವಿಜಯಪುರದ ಮದೀನಾ ನಗರದಲ್ಲಿ ಬಾಗಪ್ಪ ಹರಿಜನನನ್ನು ಕ್ರೂರವಾಗಿ ಕೊಚ್ಚಿ ಕೊಲೆಗೈಯಲಾಗಿತ್ತು. ಆಟೋದಲ್ಲಿ ಬಂದಿದ್ದ ದುಷ್ಕರ್ಮಿಗಳು ವಿದ್ಯುತ್ ಸಂಪರ್ಕ ತೆಗೆದು ಕತ್ತಲೆ ಮಾಡಿ ಬಳಿಕ ಬಾಗಪ್ಪ ಮೇಲೆ ಹಲ್ಲೆಗೈದಿದ್ದರು. ಕೈಕಾಲುಗಳನ್ನು ಕತ್ತರಿಸಿದ್ದಲ್ಲದೇ ಶವದ ಬಟ್ಟೆ ಬಿಚ್ಚಿ ಮರ್ಮಾಂಗವನ್ನು ಜಜ್ಜಿ ಕ್ರೌರ್ಯ ಮೆರೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ