Kannada NewsKarnataka NewsLatest

ಅಪ್ತಾಪ್ತ ಬಾಲಕಿಗೆ ಚುಡಾಯಿಸಿದ ಅಪ್ತಾಪ್ತ ಬಾಲಕ; ಬುದ್ಧಿ ಹೇಳಲು ಹೋದ ನಾಲ್ವರಿಗೆ ಚೂರಿ ಇರಿತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಅಪ್ರಾಪ್ತ ಬಾಲಕ ಚುಡಾಯಿಸಿದ ಪ್ರಕರಣ ನಾಲ್ವರ ಮೇಲೆ ಚೂರಿ ಇರಿತದ ಘಟನೆಯಲ್ಲಿ ಪರ್ಯವಸಾನವಾಗಿದೆ.

ಬೈಲಹೊಂಗಲ ಪಟ್ಟಣದ ಆಶ್ರಯ ಕಾಲನಿಯಲ್ಲಿ ಈ ಘಟನೆ ನಡೆದಿದೆ.  ರಫೀಕ್ ಕುರಿಕೊಪ್ಪ, ಸಾಹಿದ್ ಸೌದಾಗರ್, ಅತಾವುಲ್ಲಾ ಹುಬ್ಬಳ್ಳಿ, ಮೆಹಬೂಬ್ ಹುಬ್ಬಳ್ಳಿ  ಚೂರಿ ಇರಿತಕ್ಕೆ ಒಳಗಾದವರು. ಜಗಳ ಬಿಡಿಸಲು ಹೋದ ರವಿ ತಿಮ್ಮಣ್ಣವರ್ ಎಂಬುವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದವರ ಗುಂಪಿನಲ್ಲಿದ್ದ ಒಬ್ಬನೂ ಗಾಯಗೊಂಡಿದ್ದಾನೆ.

Home add -Advt

ತಮ್ಮ ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಲು ಬಾಲಕಿಯ ತಂದೆ  ಹಿರಿಯರ ಸಮೇತ ಹೋಗಿದ್ದರು. ಬಾಲಕಿಯನ್ನು ಚುಡಾಯಿಸಿದ್ದ 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರಿಗೆ ಬುದ್ಧಿ ಹೇಳಲು ಮುಂದಾದಾಗ ಮಾತಿಗೆ ಮಾತು ಬೆಳೆದು ಕಲಹ ಉಂಟಾಯಿತು.

ಈ ಸಂದರ್ಭದಲ್ಲಿ ಬಾಲಕಿಯ ತಂದೆ  ಜತೆ ಹೋಗಿದ್ದ ಹಿರಿಯರ ಪೈಕಿ ನಾಲ್ವರ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿಯಲಾಗಿದೆ‌. ಗಾಯಾಳುಗಳಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಎಸ್ ಪಿ ತೆರಳಿ ಪರಿಶೀಲಿಸಿದ್ದಾರೆ. ಗುಂಪು ಘರ್ಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಇತ್ತ ಬಿಮ್ಸ್ ಆಸ್ಪತ್ರೆ ಬಳಿಯೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಶಿಕ್ಷಣ ಕ್ಷೇತ್ರಕ್ಕೆ ವಾಸ್ತವದ ಚಿಕಿತ್ಸೆ; ಅಮೂಲಾಗ್ರ ಬದಲಾವಣೆಯ ನಿರೀಕ್ಷೆಯಲ್ಲಿ

Related Articles

Back to top button