Kannada NewsKarnataka NewsNationalPolitics

*ದಕ್ಷಿಣ ಆಫ್ರಕಾದಿಂದ ಬೆಂಗಳೂರಿಗೆ ನಾಲ್ಕು ಚಿತಾಗಳ ಆಗಮನ*

ಪ್ರಗತಿವಾಹಿನಿ ಸುದ್ದಿ: ಮಧ್ಯರಾತ್ರಿ ದಕ್ಷಿಣ ಆಫ್ರಕಾದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಚಿತಾ ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದಿವೆ.

ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಚೀತಾಗಳನ್ನು ವಿಮಾನ ನಿಲ್ದಾಣಕ್ಕೆ ತೆರಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಬರಮಾಡಿಕೊಂಡಿದ್ದಾರೆ. ಈ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ಕಾರಣ, ಅವುಗಳಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಲು ಸೂಚನೆ ನೀಡಲಾಗಿದೆ.

ವನ್ಯಜೀವಿಗಳನ್ನು ಕ್ವಾರಂಟೈನಲ್ಲಿಡಬೇಕು, 30 ದಿನಗಳ ಕಾಲ ಗೊತ್ತುಪಡಿಸಿದ ಆಹಾರ ನೀಡಬೇಕು, ಈ ವಿದೇಶಿ ವನ್ಯಜೀವಿಗಳಿಗೆ ಸೋಂಕು ಏನಾದರೂ ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗೆ ಸಚಿವರು ತಿಳಿಸಿದ್ದಾರೆ.

Home add -Advt

Related Articles

Back to top button