
100ಕ್ಕೂ ಹೆಚ್ಚು ಬೆಕ್ಕುಗಳು ಸಾವು
ಪ್ರಗತಿವಾಹಿನಿ ಸುದ್ದಿ: ಹಕ್ಕಿ ಜ್ವರದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ. ಮುದ್ದುಬೆಕ್ಕುಗಳಿಗೆ ಮಾರಣಾಂತಿಕ ಎಫ್ ಪಿವಿ ವೈರಸ್ ಕಾಣಿಸಿಕೊಂಡಿದ್ದು, ರಾಯಚೂರಿನಲ್ಲಿ ನೂರಾರು ಬೆಕ್ಕುಗಳು ಸಾವನ್ನಪ್ಪಿವೆ.
ಎಫ್ ಪಿವಿ ವೈರಸ್ ಅತಿವೇಗವಾಗಿ ಹರಡುತ್ತವೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಿನ್ನೆಲೆಯಲ್ಲಿ ಮನೆಯಲ್ಲಿ ಬೆಕ್ಕುಗಳಿದ್ದರೆ ಅಥವಾ ಬೆಕ್ಕುಗಳನ್ನು ಸಾಕುವವರು ಅಗತ್ಯ ಮುನ್ನಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಎಫ್ ಪಿವಿ ವೈರಸ್ ಮಾರಣಾಂತಿಕ ಸೋಂಕಾಗಿದ್ದು, ಹತ್ತು ಬೆಕ್ಕುಗಳಲ್ಲಿ ಒಂದು ಬೆಕ್ಕಿಗೆ ವೈರಸ್ ತಗುಲಿದರೆ ಕೆಲವೇ ಸಮಯದಲ್ಲಿ ಉಳಿದ ಬೆಕ್ಕುಗಳಲ್ಲಿಯೂ ಸೋಂಕು ಹರಡುತ್ತದೆ. ಸಾಮಾನ್ಯವಾಗಿ ಈ ಸೋಂಕು ತಗುಲಿದ ಬೆಕ್ಕುಗಳು ಸಾವನ್ನಪ್ಪುತ್ತವೆ. ರಾಜ್ಯದಲ್ಲಿಇ ಬೆಕ್ಕುಗಳಲ್ಲಿ ಕಂಡುಬರುತ್ತಿರುವ ಎಫ್ ಪಿವಿ ವೈರಸ್ ಆತಂಕಕ್ಕೆ ಕಾರಣವಾಗಿದೆ.