
ಪ್ರಗತಿವಾಹಿನಿ ಸುದ್ದಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಮಾಜಿ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಪರಶುರಾಮ್ ಬಂಧಿತ ಆರೋಪಿ. ಸರ್ಕಾರಿ ನೌಕರಿ, ಕಾಮಗಾರಿ ಗುತ್ತಿಗೆ ಕೆಲಸ ಕೊಡಿಸುವುದಾಗಿ ಹೇಳಿ ಹಲವರಿಗೆ ವಂಚಿಸಿದ್ದ. ಬೀದರ್ ಮೂಲದ ಕಿರಣ್ ಕುಮಾರ್ ಎಂಬುವವರಿಗೆ 14.90 ಲಕ್ಷ ರೂಪಾಯಿ ಹಣ ವಂಚಿಸಿದ್ದ. ಈ ಹಿನ್ನೆಲೆಯಲ್ಲಿ ಕಿರಣ್ ಕುಮಾರ್ ದೂರು ದಾಖಲಿಸಿದ್ದರು.
ಗುರುತು ಸಿಗಬಾರದು ಎಂದು ಆರೋಪಿ ತಲೆಬೋಳಿಸಿಕೊಂಡು ಬೆಂಗಳೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದ. ದೂರಿನ ಆಧಾರದ ಮೇಲೆ ಪರಶುರಾಮ್ ನನ್ನು ಬಂಧಿಸಲಾಗಿದೆ.
ಈತನ ಬಂಧನದ ಬಳಿಕ ಇತನ ಇನ್ನಷ್ಟು ವಂಚನೆ ಪ್ರಕರಣ ಬಯಲಾಗಿದೆ. ಆರೋಪಿ ಪರಶುರಾಮ್, 39 ಜನರಿಗೆ 1.50 ಕೋಟಿ ವಂಚಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ