ಪ್ರಗತಿವಾಹಿನಿ ಸುದ್ದಿ; ಹೈ ರೈಸ್ ಕಟ್ಟಡಗಳ ಸ್ಟಂಟ್‌ಗಳ ಮೂಲಕವೇ ಹೆಸರುವಾಸಿಯಾಗಿದ್ದ ರೆಮಿ ಲುಸಿಡಿ, ಹಾಂಕಾಂಗ್‌ನಲ್ಲಿ ಅಂಥದ್ದೇ ಪ್ರಯತ್ನ ಮಾಡುವ ಯತ್ನದಲ್ಲಿ 68ನೇ ಮಹಡಿಯಿಂದ ಅಂದಾಜು 721 ಫೀಟ್ ಎತ್ತರಿಂದ ಬಿದ್ದು ಸಾವನಪ್ಪಿದ್ದಾರೆ.
ವಿಶ್ವದ ಗಗನಚುಂಬಿ ಕಟ್ಟಡಗಳನ್ನು ಏರಿ ವಿಡಿಯೋಗಳನ್ನು ಮಾಡುವ ಮೂಲಕವೇ ರೆಮಿ ಡೇರ್‌ಡೆವಿಲ್ ಎಂದು ಗುರುತಿಸಿಕೊಂಡಿದ್ದರು. ಇದೀಗ ರೆಮಿ ಲುಸಿಡಿ 721 ಫೀಟ್ ಎತ್ತರದಲ್ಲಿ ಸಹಾಸ ಮಾಡಲು ಹೋಗಿ ಇಹಲೋಕ ತ್ಯಜಿಸಿದ್ದಾರೆ.
ಹಾಂಕಾಗ್‌ನಲ್ಲಿನ ಟ್ರಗುಂಟರ್ ಟವರ್ ಸಂಕೀರ್ಣವನ್ನು ಏರುವ ಹಾದಿಯಲ್ಲಿದ್ದ ರೆಮಿ ಲುಸಿಡಿ ಆಯತಪ್ಪಿ ಬಿದ್ದು ಸಾವು ಕಂಡಿದ್ದಾರೆ ಎಂದು ಈ ದುರಂತದ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ನೋಡಲು ಕೂಡ ಕಷ್ಟವಾಗುತ್ತಿದ್ದ ಕಟ್ಟಡಗಳನ್ನು ನೋಡನೋಡುತ್ತಿದ್ದಂತೆಯೇ ಸರಸರವಾಗಿ ಏರಿ ಅದರ ವಿಡಿಯೋಗಳು ಹಾಗೂ ಫೋಟೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ 30 ವರ್ಷದ ರೆಮಿ ಲುಸಿಡಿ ಪೋಸ್ಟ್ ಮಾಡುತ್ತಿದ್ದ.
ಜಗತ್ತಿನ ಸಾಕಷ್ಟು ಗಗನಚುಂಬಿ ಕಟ್ಟಡಗಳನ್ನು ಏರಿದ ದಾಖಲೆ ಹೊಂದಿರುವ ರೆಮಿ ಲುಸಿಡಿ, ಕ್ರೇನ್‌ಗಳು, ವಿದ್ಯುತ್ ಟ್ರಾನ್ಸಮಿಟರ್ ಟವರ್‌ಗಳು, ರೇಡಿಯೋ ಟವರ್‌ಗಳನ್ನು ಏರಿದ ದಾಖಲೆ ಹೊಂದಿದ್ದಾರೆ.
ಕಟ್ಟದ ಟಾಪ್ ಫ್ಲೋರ್‌ನಲ್ಲಿದ್ದ ಪೆಂಟ್‌ಹೌಸ್ ತನಕ ತಲುಪಿದ್ದ ರೆಮಿ ಲುಸಿಡಿ ಅಲ್ಲಿನ ಕಿಟಕಿಯನ್ನು ಬಡಿದು ಮನೆಯ ಒಳಗಿನವರನ್ನು ಕರೆದಿದ್ದರು. ಆದರೆ, ಒಳಗಿನ ವ್ಯಕ್ತಿ ಹೊರಗೆ ಬಂದು ಸಹಾಯ ಮಾಡಲು ವೇಳೆಗಾಗಲೇ ರೆಮು ಲುಸಿಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಕಳೆದ ಗುರುವಾರ ಈ ಘಟನೆ ಸಂಭವಿಸಿದೆ. ಸಂಜೆಯ 7.30ರ ವೇಳೆಗೆ ವಸತಿ ಸಂಕೀರ್ಣದ ಸಮೀಪ ಬಂದಿದ್ದ ರೆಮಿ ಲುಸಿಡಿ, ಅಲ್ಲಿನ ಭದ್ರತಾ ಸಿಬ್ಬಂದಿಗೆ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನ ಭೇಟಿಗೆ ಬಂದಿದ್ದಾಗಿ ತಿಳಿಸಿದ್ದರು. 68ನೇ ಮಹಡಿಗೆ ಹೋಗಿ ಅಲ್ಲಿಂದ ಫೋಟೋ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರೆಮಿ ಕುಸಿದು ಬಿದ್ದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ