Belagavi NewsBelgaum NewsKannada News

*ಸೌಹಾರ್ದ ಮಾನವ ಸರಪಳಿ ಅಭಿಯಾನ*

ಪ್ರಗತಿವಾಹಿನಿ ಸುದ್ದಿ: ದೇಶದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣ. ಧರ್ಮಗಳನ್ನು ಗೌರವಿಸಿ, ಪ್ರೀತಿಸುವ ಭಾವನೆಯನ್ನು ಬೆಳಿಸಿಕೊಂಡು ಒಗ್ಗಟ್ಟಾಗಿ ನಿಲ್ಲೋಣ. ಧರ್ಮಗಳ ಹೂದೋಟವಾಗಿರುವ ದೇಶದಲ್ಲಿ ಸೌಹಾರ್ದತೆಯಿಂದ ಬದುಕಿನ ಮಾತ್ರ ಪರಂಪರೆ ಬೇರು ಉಳಿಯಲು ಸಾಧ್ಯ ಎಂದು ಎಂದು ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ‌ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಕರ್ನಾಟಕ ವೇದಿಕೆಯ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸಾಹಾರ್ದತಾ ಮಾನವ ಮಾನವ ಸರಪಳಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಖಃ ಶಾಂತಿ ನೆಮ್ಮದಿ ನೆಲೆಸಬೇಕಾಗಿದೆ. ಹೀಗಾಗಿ, ಸರ್ವಧರ್ಮಗಳು ಮಾನವಿತೇಯ ಮೌಲ್ಯಗಳನ್ನು ಅವಳಕೊಂಡು ಸೌಹಾರ್ದತೆಯ ದಾರಿಯಲ್ಲಿ ಸಾಗಿ. ಸೌಹಾರ್ದತೆಯಿಂದ ಬಾಳಬೇಕೆಂದು ನೂರಾರು ವರ್ಷಗಳಿಂದ ಹೇಳಲಾಗುತ್ತಿದೆ. ಅವುಗಳನ್ನು ಭಾಷಣಕ್ಕೆ ಮಾತ್ರ ಸೀಮಿತವಾಗಿವೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಸಮಾಜ ಸುಧಾರಕರು, ಚಿಂತಕರು ಒಂದಾಗಿ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಸಾಗೋಣ ಎಂದರು.

ಮುಸ್ಲಿಂ ಸಮುದಾಯದ ಮೌಲಾನಾ ಮುಸ್ತಾಕ್ ಅಹಮ್ಮದ್ ಅಶ್ರಪಿ ಮಾತನಾಡಿ, ನೋಟಿನಲ್ಲಿ ರಾಮನನ್ನು ಭಾವಚಿತ್ರ ಅವಳವಡಿಸಿ, ದೇಶದ ಧರ್ಮಗಳನ್ನು ಬೇರೆ-ಬೇರೆ ಮಾಡಲಾಗುತ್ತಿದೆ. ಅದು, ಸರಿಯಲ್ಲ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಾಂಧಿಜೀಯವರ ಭಾವಚಿತ್ರ ಇದ್ದರೆ ಸೌಹಾರ್ದತೆಯ ನಾಡಾಗಲಿದೆ. ಧರ್ಮಗಳ ಒಲೈಕೆಗೆ ರಾಮನ ಹೆಸರು ಅಸ್ತ್ರ ಮಾಡಿಕೊಳ್ಳುವುದು ಅಪಹಾಸ್ಯ ಎಂದರು.

ಕ್ರೈಸ್ತ ಪಾದ್ರಿ ಡಾ. ಪಾಧರ್ ಮೆನಿನೊ ಗೋನ್ಸಾಲ್ವೀಸ್ ಮಾತನಾಡಿ, ಪ್ರಕೃತಿ ಸೌಂಧರ್ಯವನ್ನು ಪ್ರೀತಿಸುವ ಉತ್ತಮ ವ್ಯಕ್ತಿ ನಾವಾಗಬೇಕು ಹೊರತು, ಪ್ರಕೃತಿ ನೀಡಿರುವ ಧರ್ಮಗಳನ್ನು ಒಂದೇ ಧರ್ಮಕ್ಕೆ ಸೀಮಿತಗೊಳಿಸಿ ನಾಡಿನಲ್ಲಿ ಸೌಹಾರ್ದತೆ ಹಾಳು ಮಾಡಬಾರದು ಎಂದು ವಿಷಾದ ವ್ಯಕ್ತಪಡಿಸಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮಾ ಗಾಂಧಿಜೀಯವರು ಸಮಾಜದ ಸುಧಾರಣೆ ಹೋರಾಟ ಮಾಡಿದ್ದಾರೆ‌. ಸಮಾಜದಲ್ಲಿ ದೇವರನ್ನು ಕಾಣುವ ಮೂಲಕ ಎಲ್ಲವನ್ನೂ ಪ್ರೀತಿಯಿಂದ ನೋಡಬೇಕು. ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದತೆಯ ಪರಂಪರೆಯನ್ನು ಉಳಿಸೋಣ. ಜಾತಿ, ಧರ್ಮಗಳು ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳೋಣ ಎಂದರು.

ಕಾರ್ಮಿಕ ಜಿಲ್ಲಾ ಕಾರ್ಯದರ್ಶಿ, ಜಿ ಎಮ್ ಜೈನೆಕರ್ ಮಾತನಾಡಿ, ಧರ್ಮ ಒಡೆಯುವ ಮನಸ್ಥಿತಿ ನಿರ್ಮಾಣವಾಗುತ್ತಿದೆ. ದೇವರ ಹೆಸರಿನಲ್ಲಿ ಧರ್ಮದ ಅಸ್ತ್ರಗಳನ್ನು ಬಿಸುವ ಯತ್ನವನ್ನು ತಡೆಯಬಹುದು. ನಾವೆಲ್ಲರೂ ಒಗ್ಗಟ್ಟಾಗಿದರೆಇದನ್ನು ತಡೆಯಬಹುದು.

ಸೌಹಾರ್ದ ವೇದಿಕೆಯಿಂದ ರಾಜ್ಯಾದ್ಯಂತ ಜಾಗೃತ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಮುವಾದಿಗಳನ್ನು ಒಡೆದೊಸಿ ನಮ್ಮ ಪರಂಪರೆಯ ಸೌಹಾರ್ದತೆಯನ್ನು ಉಳಿಸೋಣ ಎಂದರು.

ಡಾ.ವಾಯ್ ಬಿ. ಹಿಮ್ಮುಡಿ ಮಾತನಾಡಿ, ಮಹಾತ್ಮ ಗಾಂಧಿಯವರ ರಾಮನನ್ನು ಈಗ ದುರುಪಯೋಗ ಮಾಡಿಕೊಳ್ಳುವ ಯತ್ನ ನಡೆಯುತ್ತಿದೆ. ಹೀಗಾಗಿ ರಾಮನಿಂದ ಸೀತೆ, ಲಕ್ಷ್ಮಣ, ಹನುಮಂತನನ್ನು ಅಗಲಿಸಿ ಕೇವಲ ರಾಮನನ್ನು ಮಾತ್ರ ಪ್ರತಿಷ್ಠಾನ ಮಾಡಲಾಗಿದೆ. ನಮಗೆ ಕುವೆಂಪು, ಕನಕದಾಸರ ರಾಮ ಬೇಕು. ನಮ್ಮ ದೇಶಕ್ಕೆ ಬೇಕಾಗಿರುವುದು ವೇದಾಂತ ಮೆದುಳು , ಇಸ್ಲಾಮಿಕ್ ರ ಮನಸ್ಸುಗಳು ಹೊತರು, ಭಾವನೆಗಳಿಗೆ ದಕ್ಕೆ ತರುವವರಲ್ಲ ಎಂದು ಹೇಳಿದರು.

ಮಾನವ ಬಂದುತ್ವ ವೇದಿಕೆ ಭರಮಣ್ಣ ಸಂಚಾಲಕ ತೋಳಿ ಮಾತನಾಡಿ, ಎಲ್ಲಾ ಸಮುದಾಯದ ಜನರು ಸೌಹಾರ್ದ ಸಮಾಜದಲ್ಲಿ ಬದುಕಿ ಬಾಳಬೇಕಿದೆ. ಆದರೆ, ಗಾಂಧಿಜೀಯವರ ಬಲಿದಾನ ನಂತರ ದೇಶದಲ್ಲಿ ನಾಥೋರೊಮ ಗೋಡಸೆಯನ್ನು ಆರಾಧನೆ ಮಾಡುವಂತಹ ಪರಂಪರೆ ಹುಟ್ಟಿಕೊಂಡಿರುವುದು ನೋವಿನ ಸಂಗತಿ. ಮಹಾತ್ಮಾ ಗಾಂಧಿಜಿಯವರ ವಿಚಾರ ಹಾಗೂ ಚಿಂತನೆಗಳನ್ನು ವಿಶ್ವವೇ ಗೌರವಿಸುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಅವರನ್ನು ವಿರೋಧಿಸುವ ಕೆಲಸಗಳು ನಡೆಯುತ್ತಿರುವುದು ಸಮಾಜಕ್ಕೆ ಇದು ಆತಂಕಕಾರಿ ವಿಷಯವಾಗಿದೆ ಎಂದರು.

ದೇಶವನ್ನು ಧರ್ಮಕ್ಕೆ ಸೀಮಿತಗೊಳಿಸಿ, ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಸೌಹಾರ್ದ ಪರಂಪರೆಯ ವೇದಿಕೆಯೊಂದಿಗೆ ಸಹಸ್ರಾರು ಯುವಕರು ಬಾಗಿಯಾಗಿ. ನಾಡಿನ ಪರಂಪರೆಯನ್ನು ಉಳಿಸೋಣ ಎಂದರು ಹೇಳಿದರು.

ಬಳಿಕ ರಾಣಿ ಚಮ್ಮನ್ನ ವೃತ್ತದಲ್ಲಿ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಸೌಹಾರ್ದ ಮಾನವ ಸರಪಳಿ ಅಭಿಯಾನದಲ್ಲಿ ನೂರಾರು ಜನರು ಭಾಗಿ ಮಾನವ ಸರಪಳಿಗೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸರಜೂ ಕಾಟ್ಕರ್‌, ವಾಯ್‌ ಬಿ.ಹಿಮ್ಮಡಿ, ನಾಗೇಶ ಸಾತೇರಿ ಹಾಗೂ ಇತತರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button