Latest

ಶಾಸಕರಿಗೆ ಛಿಮಾರಿ ಹಾಕಿದ ದಡದಹಳ್ಳಿ ಗ್ರಾಮಸ್ಥರು

 

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ದಡದಹಳ್ಳಿ ಗ್ರಾಮಕ್ಕೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಇಂದು ಬೇಟಿ ನೀಡಿದರು. ಶಾಸಕರು ಆಗಮಿಸುತ್ತಿದ್ದಂತೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಊರಿನ ಒಳ ಪ್ರವೇಶದಲ್ಲಿ ಶಾಸಕರನು ತಡೆದ ಊರಿನ ಜನರು, ಈ ಕ್ಷೇತ್ರದ ಶಾಸಕರಾಗಿ ನೀವು ಈಗ ಭೇಟಿ ಕೊಡುತ್ತಿದ್ದೀರಿ. ಹತ್ತು ವರ್ಷಗಳಿಂದ ಯಾವುದೇ ತರಹದ ಅಭಿವೃದ್ಧಿ ಕಾರ್ಯಗಳು ಸಹಾ ಇಲ್ಲಿ ನಡೆದಿಲ್ಲ. ಚುನಾವಣೆ ಹತ್ತಿರ ಬಂದಿದೆ ಎಂದಾಗ ಮಾತ್ರ ನೀವು ಜನರ ಭೇಟಿ ಮಾಡಲು ಬರುತ್ತಿರಿ. ಗೆದ್ದ ನಂತರ ಕ್ಷೇತ್ರದ ಕಡೆಗೆ ತಿರುಗಿಯೂ ಸಹ ನೋಡುವುದಿಲ್ಲ. ನಮ್ಮ ಊರಿನಲ್ಲಿ ಯಾವುದೇ ರಸ್ತೆ ದುರಸ್ತಿಯೂ ಆಗಿಲ್ಲ, ಕುಡಿಯಲು ನೀರು ಸಹ ಇಲ್ಲ. ಊರಿಗೆ ಬಸ್ ಕೂಡಬರುವುದಿಲ್ಲ. ನಾವು ಎಲ್ಲಿಗೆ ಹೋಗಬೇಕು? ಯಾರನ್ನು ಕೇಲಬೇಕು? ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ನೀವು ಯಾವುದೇ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ ಎಂದು ಜನರು ಶಾಸಕರನ್ನು ರಸ್ತೆಯಲ್ಲೇ ನಿಲ್ಲಿಸಿ ಛಿಮಾರಿ ಹಾಕಿದ್ದಾರೆ.

Home add -Advt

MLC ಕಾರು ಡಿಕ್ಕಿ; ಬೈಕ್ ಸವಾರ ಗಂಭೀರ; ನೀನ್ಯಾವ ಸೀಮೆ ಎಂಎಲ್ ಸಿ…ಸಾರ್ವಜನಿಕರ ಆಕ್ರೋಶ

https://pragati.taskdun.com/bjp-mlc-n-ravikumarcarbikeaccidentbike-rider-injuerdkolara/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button