ಪ್ರಗತಿವಾಹಿನಿ ಸುದ್ದಿ; ಮೈಸೂರು: ಅಬ್ಬರಿಸಿ ಬೊಬ್ಬಿರಿಯುವುದಷ್ಟೇ ರಾಜಕಾರಣ ಅಲ್ಲ. ನಾನು ಮಾತಾನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ ದೇವೇಗೌಡ, ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಮೌನವಹಿಸಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆಯೇ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ. ನನ್ನದು ಸೈಲೆಂಟ್ ಪಾಲಿಟಿಕ್ಸ್ ಎಂದರು.
ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್‍ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕುಮಾರಸ್ವಾಮಿಯವರನ್ನು ಇಡೀ ರಾಜ್ಯವೇ ಕುಮಾರಣ್ಣ ಎಂದಿದೆ. ಡಾ.ರಾಜ್ ಬಿಟ್ಟರೆ ಅಣ್ಣ ಎಂದಿದ್ದು ಕುಮಾರಸ್ವಾಮಿಯವರಿಗೆಗೆ ಮಾತ್ರ. ಕುಮಾರಸ್ವಾಮಿಯವರಿಗೆ ಯಾಕೆ ವೈರಾಗ್ಯ? ಎಂದು ಪ್ರಶ್ನಿಸಿದರು. ಹೆಚ್.ಡಿ ಕುಮಾರಸ್ವಾಮಿ ಇನ್ನೊಮ್ಮೆ ಸಿಎಂ ಆಗಬಹುದು. ಮತ್ತೆ ಫೀನಿಕ್ಸ್ನಂತೆ ಎದ್ದು ಬರಬಹುದು.ಪಾಪ ನಮ್ಮ ರೇವಣ್ಣ ಅವರ ಡಿಸಿಎಂ ಅಗುವ ಆಸೆಯೂ ನೆರವೇರಲಿ. ಕುಮಾರಸ್ವಾಮಿ ಅವರಿಗೆ ವೈರಾಗ್ಯ, ರಾಜಕೀಯ ನಿವೃತ್ತಿಯ ಮಾತು ಏಕೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ