Kannada NewsKarnataka NewsLatest
ಗೋಡೆ ಬಿದ್ದು ವ್ಯಕ್ತಿ ಸಾವು: ಕೆಲವೇ ಗಂಟೆಗಳಲ್ಲಿ 6 ಲಕ್ಷ ರೂ. ಚೆಕ್ ವಿತರಿಸಿದ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಪ್ರಕೃತಿ ವಿಕೋಪ ಪರಿಹಾರ ನಿಧಿಯ ನೆರವನ್ನು ಪಡೆಯಲು ವರ್ಷಗಳ ಕಾಲ ಅಡ್ಡಾಡಬೇಕಾದ ಸಂದರ್ಭದಲ್ಲಿ ಗೋಡೆ ಬಿದ್ದು ಮೃತನಾದ ವ್ಯಕ್ತಿಯ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಶಾಸಕ ಗಣೇಶ ಹುಕ್ಕೇರಿ ಚೆಕ್ ವಿತರಿಸಿದರು.

ಈ ಸುದ್ದಿ ತಿಳಿದ ಕೂಡಲೇ ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಲ್ಲದೆ,
ಮೃತ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಿನ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಸದಲಗಾ ಸಿಪಿಐ, ಪಿಎಸ್ಐ ಹಾಗೂ ತಹಶೀಲ್ದಾರ್ ಉಪಸ್ಥಿತರಿದ್ದರು.