ಗಣೇಶ ವಿಸರ್ಜೆ ವೇಳೆ ದುರ್ಘಟನೆ -ಕೆರೆಯಲ್ಲಿ ಮುಳುಗಿ ಯುವಕರಿಬ್ಬರ ಸಾವು -Updated News
ಗಣೇಶ ವಿಸರ್ಜೆ ವೇಳೆ ದುರ್ಘಟನೆ -ಕೆರೆಯಲ್ಲಿ ಮುಳುಗಿ ಯುವಕರಿಬ್ಬರ ಸಾವು
ಪ್ರಗತಿವಾಹಿನಿ ಸುದ್ದಿ, ಖಾನಾಪುರ- ಗಣೇಶ ವಿಸರ್ಜನೆ ವೇಳೆ ಯೂವಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಗಣೇಶನ ವಿಗ್ರಹಗಳನ್ನು ವಿಸರ್ಜಿಸಲು ಕೆರೆಗೆ ತೆರಳಿ ನೀರಿಗಿಳಿದಿದ್ದ ಇಬ್ಬರು ಯುವಕರು ಕೆರೆಯ ನೀರಿನ ಸೆಳೆತಕ್ಕೆ ಸಿಕ್ಕು ಸಾವನ್ನಪ್ಪಿದರು.
ತಾಲ್ಲೂಕಿನ ಬೇಟಗೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಬೆಟಗೇರಿ ಗ್ರಾಮದ
ಸಾಗರ ಪಾಂಡುರಂಗ ಗುರವ (22) ಮತ್ತು ಓಂಕಾರ ರಾಮಲಿಂಗ ಸುತಾರ (17) ಎಂದು
ಗುರುತಿಸಲಾಗಿದೆ.
ಗುರುವಾರ ಸಂಜೆ ತಮ್ಮೂರಿನ ಗಣೇಶ ವಿಗ್ರಹಗಳನ್ನು ಗ್ರಾಮದ ಹೊರವಲಯದ ಈಶ್ವರಲಿಂಗ
ದೇವಾಲಯದ ಬಳಿಯ ಕೆರೆಯಲ್ಲಿ ವಿಸರ್ಜಿಸಲು ಗ್ರಾಮಸ್ಥರೊಂದಿಗೆ ತೆರಳಿದ್ದ ಇವರಿಬ್ಬರೂ
ಗಣೇಶ ವಿಗ್ರಹಗಳನ್ನು ಕೆರೆಯ ಮಧ್ಯಕ್ಕೆ ಕೊಂಡೊಯ್ದು ಮುಳುಗಿಸಲು
ಪ್ರಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಮೊದಲು ಓಂಕಾರ ಕೆರೆಯ ಮಧ್ಯಕ್ಕೆ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ಹೋಗಿದ್ದು, ಮರಳಿ ದಡಕ್ಕೆ ಬರಲಾಗದೇ ನೀರಿನಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ ಸಾಗರ ಸಹ ಓಂಕಾರ ಅವರನ್ನು ರಕ್ಷಿಸಲು ಹೋಗಿ ತಾವೂ ಕೂಡ ನೀರಿನಲ್ಲಿ ಮುಳುಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನಾ ಸ್ಥಳಕ್ಕೆ ಪಿ.ಎಸ್.ಐ ಬಸನಗೌಡ ಪಾಟೀಲ ಭೇಟಿ ನೀಡಿದ್ದು, ಕೆರೆಯ ಮಧ್ಯದಲ್ಲಿ
ಸಿಲುಕಿದ್ದ ಇಬ್ಬರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಮೋತಿಲಾಲ ಪವಾರ
ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ -Updated
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ