Kannada NewsLatest

ಗಾಣಿಗ ಸಮಾಜಕ್ಕೆ ಸಿಎಂ ಬೊಮ್ಮಾಯಿ ಅನ್ಯಾಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈ ಬಾರಿ ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಗಾಣಿಗ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಅದ್ದರಿಂದ ಈ ಕೂಡಲೇ ಗಾಣಿಗ ಸಮಾಜಕ್ಕೆ ಮಂತ್ರಿಸ್ಥಾನ ನೀಡಬೇಕು ಎಂದು ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ರಾಮಪ್ಪ ಉಟಗಿ ಅವರು ಆಗ್ರಹಿಸಿದರು.‌

ಶುಕ್ರವಾರ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಸರ್ಕಾರದಲ್ಲಿ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿತ್ತು ಆದರೆ ಈಗ ಕೈ ಬಿಟ್ಟಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಗಾಣಿಗ ಸಮಾಜ ಸುಮಾರು 2-3 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಅಲ್ಲದೇ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಗಾಣಿಗ ಸಮಾಜದ ಜನಸಂಖ್ಯೆ ಇದೆ. ನೂತನ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದ್ದು , ಕೂಡಲೇ ಇದನ್ನು ಸರಿ ಪಡಿಸಿ ಗಾಣಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯದಲ್ಲಿ 9 ರಿಂದ 10 ಲೋಕಸಭಾ ಸದಸ್ಯರನ್ನು ಗೆಲ್ಲಿಸುವಲ್ಲಿ ನಮ್ಮ ಸಮಾಜ ಪ್ರಮುಖ ಪಾತ್ರವಹಿಸಿದೆ. ಕರ್ನಾಟಕ ರಾಜ್ಯದಲ್ಲಿ 40 ರಿಂದ 50 ವಿಧಾನಸಭಾ ಸದಸ್ಯರನ್ನು ಗೆಲ್ಲಿಸುವಲ್ಲಿ ನಮ್ಮ ಸಮಾಜ ಪ್ರಮುಖ ಪಾತ್ರವಹಿಸಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯೊಂದಿಗೆ ನಮ್ಮ ಸಮಾಜ ಯಾವತ್ತು ಒಡನಾಟಹೊಂದಿ ಪಕ್ಷದ ಅಭಿವೃದ್ಧಿಗೆ ಶ್ರಮಿಸಿದೆ. ಕರ್ನಾಟಕ ರಾಜ್ಯದ ಉಪ ಚುನಾವಣೆಗಳಾದ ಅಥಣಿ, ಕಾಗವಾಡ, ಮಸ್ತಿ, ಬಸವ ಕಲ್ಯಾಣ, ಈ ಮೂರು ಕ್ಷೇತ್ರಗಳಲ್ಲಿ , ಮಹರಾಷ್ಟ್ರ ಚುನಾವಣೆಯಲ್ಲಿ ಲಕ್ಷ್ಮಣ ಸವದಿಯವರು ಗೆಲವು ಸಾಧಿಸಿವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಗಾಣಿಗ ಸಮಾಜಕ್ಕೆ ನಿಗಮ ಮಂಡಳಿಯನ್ನು ಬೇಗನೆ ರಚಿಸಬೇಕು.‌ ಕರ್ನಾಟಕ ರಾಜ್ಯದಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ ಗದ್ದಿಗೌಡರನ್ನು ಕೇಂದ್ರ ಸಚಿವರನ್ನಾಗಿ ಮಾಡಬೇಕು. ಎಂದು ತಿಳಿಸಿದರು. ‌

ಈ ವೇಳೆ ಬಸವರಾಜ್ ಕೋಣನ್ನವರ, ಕಬೇರಪ್ಪ ಸೋರಟೂರ, ಶೇಖರ್ ಹಾಲಗಿ, ಶಿದ್ರಾಯಿ ಗಾಣಗಿ, ಶೋಭಾ ಗಾಣಿಗೇರ, ಬಸವರಾಜ ಮಡ್ಡಿಮನಿ, ಪ್ರಕಾಶ ಕಾದರಗಿ, ಶಿವಶಂಕರ ಮಡ್ಡಿಮನಿ, ಮಹಾಂತೇಷ ಗಾಣಿಗೇರ, ನಾಗೇಶ ತೇಲಿ, ಮಹಾದೇವ ಸಿದ್ದನ್ನವರ, ತಿಪ್ಪಣ್ಣ ಗಾಣಗೇರ,ರಾಜೀವ ಗಾಣಗಿ, ಚಂದ್ರಪ್ಪ ಗಾಣಗೇರ ಇತರರು ಉಪಸ್ಥಿತರಿದ್ದರು.

ಹಣ ಹಂಚಿಕೆ; ಮಾಜಿ ಶಾಸಕನಿಗೆ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button