Latest

ಫುಡ್ ಡೆಲಿವರಿ ನೆಪದಲ್ಲಿ ಗಾಂಜಾ ಮಾರಾಟ; ಮೂವರು ಫುಡ್ ಡೆಲಿವರಿ ಬಾಯ್ಸ್ ಬಂಧನ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಫುಡ್ ಡೆಲಿವರಿ ಮಾಡುವ ನೆಪದಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಫುಡ್ ಡೆಲಿವರಿ ಬಾಯ್ಸ್ ಉಡುಪಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರನ್ನು ರವಿಶಂಕರ್, ಅಂಜಲ್ ಬೈಜು, ದೇವಿಪ್ರಸಾದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಫುಡ್ ಡೆಲಿವರಿ ಬ್ಯಾಗ್ ನಲ್ಲಿಯೇ ಗಾಂಜಾ ಇಟ್ಟುಕೊಂಡು ಬಂದು ಮಾರಾಟ ಮಾಡುತ್ತಿದ್ದರು.

ಸೆನ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಪಲಕ್ಕಾಡ್ ನಿಂದ ರೈಲಿನಲ್ಲಿ ಆರೋಪಿಗಳಿಗೆ ಗಾಂಜಾ ಪೂರೈಕೆಯಾಗುತ್ತಿತು ಎಂದು ತಿಳಿದುಬಂದಿದೆ.

ಬಂಧಿತರಿಂದ ಒಂದುವರೆ ಕೆಜಿ ಗಾಂಜಾ, 2 ಬೈಕ್, 4 ಮೊಬೈಲ್, 30,000 ರೂಪಾಯಿ ನಗದು ಜಪ್ತಿ ಮಾಡಲಾಗಿದೆ.

Home add -Advt

ಮಕ್ಕಳ ಕಳ್ಳರೆಂದು ಕಾರು ಬೆನ್ನಟ್ಟಿದ ಗ್ರಾಮಸ್ಥರು; ತಪ್ಪಿಸಿಕೊಳ್ಳುವ ಬರದಲ್ಲಿ ಪಲ್ಟಿಯಾಗಿ ಬಿದ್ದ ಕಾರು

https://pragati.taskdun.com/latest/villagerschase-caraccidentchild-theft-dought/

Related Articles

Back to top button