Kannada NewsKarnataka NewsLatest

*ಗವಿಗಂಗಾಧರೇಶ್ವರನಿಗೆ ಸೂರ್ಯ ಕಿರಣಗಳ ಅಭಿಷೇಕ: ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತ ಸಾಗರ*

ಪ್ರಗತಿವಾಹಿನಿ ಸುದ್ದಿ: ಸಂಕ್ರಾಂತಿಯ ಪವಿತ್ರ ದಿನದಂದು ರಾಜ್ಯ ರಾಜಧಾನಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಾವಿರಾರು ಭಕ್ತರು ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾದರು.

ಬೆಂಗಳೂರಿನ ಗವಿಪುರಂನಲ್ಲಿರುವ ಐತಿಹಾಸಿಕ ಶಿವ ದೇವಾಲಯ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಗಂಗಾಧರೇಶ್ವರನಿಗೆ ಸಂಕ್ರಾಂತಿಯಂದು ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿತ್ತವೆ. ಅಷ್ಟೇ ಅಲ್ಲ ಸಂಕ್ರಮಣದಂದು ಸೂರ್ಯದೇವರು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಪುಣ್ಯಕಾಲದಲ್ಲಿ ಕೌತುಕವೊಂದು ಸಂಭವಿಸುತ್ತದೆ. ಅಂತದ್ದೇ ಕೌತುಕ ಕ್ಷಣಗಳಿಗೆ ಇಂದು ಕೂಡ ಸಾವಿರಾರು ಭಕ್ತರು ಸಾಕ್ಷಿಯಾದರು.

ಇಂದು ಸಂಜೆ ಸೂರ್ಯ ದೇವನ ಕಿರಣಗಳು ಗವಿಗಂಗಾಧರೇಶ್ವರ ದೇವಾಯಲದ ಪ್ರವೇಶದ್ವಾರದ ಮೂಲಕವಾಗಿ ನಂದಿ ವಿಗ್ರದ ಕೊಂಬುಗಳ ಮೂಲಕವಾಗಿ ಮಹಾದ್ವಾರವನ್ನು ಪ್ರವೇಶಿಸಿ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸಿದವು. ಈ ಮೂಲ ಸೂರ್ಯದೇವನು ಶಿವಲಿಂಗಕ್ಕೆ ತನ್ನ ಕಿರಣಗಳಮೂಲಕ ಅಭಿಷೇಕ ಮಾಡಿ ನಮಸ್ಕರಿಸುವ ಮೂಲಕ ಪಥ ಬದಲಿಸಿದ್ದಾನೆ. ಸೂರ್ಯ ರಶ್ಮಿ ಆರು ಸೆಕೆಂಡುಗಳ ಕಾಲ ಶಿವಲಿಂಗದಮೇಲೆ ಸಂಪೂರ್ಣವಾಗಿ ಬಿದ್ದಿತ್ತು. ಈವೇಳೆ ಶಿವನಿಗೆ ಕ್ಷೀರಾಭಿಷೇಕ ಮಾಡಲಾಗುತ್ತಿತ್ತು. ಈ ಅಪರೂಪದ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ದೇವಾಲಯದಲ್ಲಿ ಓಂ ನಮಃ ಶಿವಾಯ ಎಂಬ ಘೋಷಣೆಗಳು ಮೊಳಗಿದವು.

ಈ ಬಾರಿ ಸೂರ್ಯದೇವರು ಬಂದು ಶಿವ ದೇವರಿಗೆ ಸಮಪೂಜೆ ಮಾಡಿ ಹೋಗಿದ್ದು. ಶಿವಲಿಂಗದ ಮೇಲೆ ಆರು ಸೆಕೆಂಡುಗಳ ಕಾಲ ಸೂರ್ಯರಶ್ಮಿ ಕೇಂದ್ರೀಕೃತವಾಗಿತ್ತು. ಯಾವುದೇ ಅಡ್ಡಿ ಆತಂಕಗಳು ಈಬಾರಿ ಇರಲಿಲ್ಲ. ಇದು ಶುಭ ಸೂಚನೆಯಾಗಿದ್ದು, ನಾಡಿಗೆ, ನಾಡಿನ ಜನತೆಗೆ ಒಳಿತಾಗಲಿದೆ ಎಂದು ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ತಿಳಿಸಿದ್ದಾರೆ.

Home add -Advt


Related Articles

Back to top button