
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಹವ್ಯಕ ಮಂಡಳದ ವಾರ್ಷಿಕ ಸರ್ವಸಾಧಾರಣ ಸಭೆ ಭಾನುವಾರ ಶ್ರೀಕೃಷ್ಣ ದೇವರಾಯ ವೃತ್ತದ ಗೀತ-ಗಂಗಾ ಕಟ್ಟಡದಲ್ಲಿ ನಡೆಯಿತು.

ಸಂಘದ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಂಘದ ವಾರ್ಷಿಕ ವರದಿಯನ್ನು ನಿಕಟಪೂರ್ವ ಕಾರ್ಯದರ್ಶಿ ಎನ್.ಎಂ.ಶಾಂತಾರಾಮ ಮಂಡಿಸಿದರು. ವಿ.ಎನ್.ಹೆಗಡೆ ವೇದಿಕೆಯಲ್ಲಿದ್ದರು. ಪರಮೇಶ್ವರ ಹೆಗಡೆ, ಶ್ರೀಧರ ಗುಮ್ಮಾನಿ ಮೊದಲಾದವರು ಮಾತನಾಡಿದರು. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಮಹಿಳೆಯರು ಶ್ರೀರಾಮ ರಕ್ಷಾ ಸ್ತ್ರೋತ್ರ ಪ್ರಸ್ತುತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ