
ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ, ಡಾ.ಎಂ.ಎಸ್. ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಯಲ್ಲಿ, ಮೇ 29 ರಿಂದ 31 ರ ವರೆಗೆ ಜರುಗಿದ “ಇನ್ವೆಂಟೊ” ಸಾಂಸ್ಕೃತಿಕ ಉತ್ಸವದಲ್ಲಿ ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ, 495 ಅಂಕಗಳೊಂದಿಗೆ, ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಫೆಸ್ಟ್ನಲ್ಲಿ ಹಲವಾರು ಕಾಲೇಜುಗಳು ಭಾಗವಹಿಸಿದ್ದರಿಂದ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಇ, ಬಿಆರ್ಚ್ ಹಾಗೂ ಎಂಬಿಎ ಪದವಿ ವಿಭಾಗದಿಂದ 50ಕ್ಕೂ ಹೆಚ್ಚು ಕಾಲೇಜುಗಳು ಈ ಸಾಂಸ್ಕೃತಿಕ ಕೂಟದಲ್ಲಿ ಭಾಗವಹಿಸಿದ್ದವು.
ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಇ–ಗೇಮಿಂಗ್, ಛಾಯಾಗ್ರಹಣ, ರಸಪ್ರಶ್ನೆ, ಫ್ಯಾಷನ್ ಮತ್ತು ಲಲಿತಕಲೆಗಳಂತಹ ವಿವಿಧ ವಿಭಾಗಗಳ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಲ್ಲ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನದೊಂದಿಗೆ ಅತಿ ಹೆಚ್ಚಿನ ಅಂಕಗಳೊಂದಿಗೆ ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳು ಜಯಗಳಿಸಿದರು.
ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು, ರಾಜೇಂದ್ರ ಬೆಳಗಾಂವಕರ್, ಜಿಐಟಿ, ಅಧ್ಯಕ್ಷರು, ಪ್ರಾಂಶುಪಾಲರು, ಪ್ರೊ.ದಿಗಂಬರ ಎ.ಕುಲಕರ್ಣಿ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ.ಸತೀಶ್ ದೇಶಪಾಂಡೆ, ಸಾಂಸ್ಕೃತಿಕ ಸಂಚಾಲಕ ಪ್ರೊ.ಪೂರ್ವ ಅಧ್ಯಾಪಕ ಹಾಗೂ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಮಸ್ತ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
*ಚಂಡಮಾರುತ ಹಿನ್ನೆಲೆ; 3 ದಿನ ಕಟ್ಟೆಚ್ಚರ; ಕರಾವಳಿಯಲ್ಲಿ ಯೆಲ್ಲೋ ಲರ್ಟ್ ಘೋಷಣೆ*
https://pragati.taskdun.com/karnatakaraincyclonealert/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ