Kannada NewsLatest

ಕಟ್ಟಡ ಕಾರ್ಮಿಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ನೆರೆ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಸದಲಗಾ ಪಟ್ಟಣದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಕಿಟ್ ಗಳನ್ನು ಕಟ್ಟಡ ಕಾರ್ಮಿಕರು, ನೆರೆ ಸಂತ್ರಸ್ತರಿಗೆ ವಿತರಿಸಲಾಯಿತು.

ಚಿಕ್ಕೋಡಿ ತಾಲೂಕಿನ ಕಲ್ಲೊಳ, ಮಾಂಜರಿ, ಯಡೂರ, ಚಂದೂರ, ಯಡೂರವಾಡಿ, ಇಂಗಳಿ, ಸದಲಗಾ ಶಮನೆವಾಡಿ, ಜನವಾಡ ಗ್ರಾಮದಲ್ಲಿ ಕೋವಿಡ್ – 19 ಪರಿಹಾರರ್ಥವಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ,ಕಾರ್ಮಿಕ ಇಲಾಖೆ, ಹಾಗೂ ಜೊಲ್ಲೆ ಉದ್ಯೋಗ ಸಮೂಹದ ಅಂಗ ಸಂಸ್ಥೆಯಾದ ಲೋಕ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ಯಕ್ಸಂಬಾ ವತಿಯಿಂದ ನೋಂದಾಯಿತರಾದ ಕಟ್ಟಡ ಕಾರ್ಮಿಕರಿಗೆ, ಹಾಗೂ ನೆರೆ ಸಂತ್ರಸ್ತರಿಗೆ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ ಅವರು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸದಲಗಾ ಪುರಸಭೆ ಸದಸ್ಯರಾದ ಆನಂದ ಪಾಟೀಲ, ಅಭಿಜಿತ ಪಾಟೀಲ, ಬಸವರಾಜ ಹಣಬರ,ಹೇಮಂತ ಶಿಂಗೆ, ಪ್ರಶಾಂತ ಕರಂಗಳೆ, ದರೆಪ್ಪ ಹವಾಲ್ದಾರ, ಅಭಿನಂದನ ಪಾಟೀಲ, ರಾಜು ಅಮೃತಸಮ್ಮನವರ, ಬಾಳಸಾಹೇಬ ಪಾಟೀಲ, ತಾತ್ಯಾಸಾಬ ನಿಡಗುಂದೆ, ಸುನೀಲ ನಂದೆ,ಬೀರೇಶ್ವರ ಸಂಸ್ಥೆಯ ಶಾಖೆಯ ಸಲಹಾ ಸಮಿತಿ ಸದಸ್ಯರು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಉಪಸ್ಥಿತರಿದ್ದರು.
ಲಸಿಕೆ ತೆಗೆದುಕೊಳ್ಳುವ ಜೊತೆಗೆ​ ಆಹಾರ ಮತ್ತು ಜೀವನ ಪದ್ಧತಿ ಬದಲಾವಣೆಯೂ ಅಗತ್ಯ – ಲಕ್ಷ್ಮಿ ಹೆಬ್ಬಾಳಕರ್   

Home add -Advt

Related Articles

Back to top button