Latest

ಬನಶಂಕರಿ ದೇವಿ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಇಲ್ಲಿನ ವಡಗಾವಿಯ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಗಣಹೋಮ ಹಾಗೂ ಚಂಡಿಕಾ ಹೋಮದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ  ದೇವಿಯ ದರ್ಶನ, ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಧಾರ್ಮಿಕ ಕಾರ್ಯಗಳು ಮನುಷ್ಯನ ಆಗುಹೋಗುಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ತಾನು, ತನ್ನದು ಎಂಬ ಭಾವನೆ ಬಿಟ್ಟು ಸಕಲ ಜಗತ್ತಿನ ಒಳಿತು ಬಯಸುವವರಿಗೆ ದೈವೀ ಶಕ್ತಿಗಳು ಸದ್ಗತಿಯನ್ನೇ ನೀಡುತ್ತವೆ ಎಂದರು.

ನಾಡಿನ ಸಮಸ್ತ ಜನತೆಗೆ ಒಳಿತು ಮಾಡುವಂತೆ ಅವರು ಈ ಸಂದರ್ಭದಲ್ಲಿ ಬನಶಂಕರಿ ದೇವಿಯಲ್ಲಿ ಪ್ರಾರ್ಥಿಸಿದರು.

Home add -Advt

ವೆಂಕಟೇಶ ಹೊನ್ನಳ್ಳಿ, ಹನುಮಂತ ಗರಡಿಮನಿ, ಉಮೇಶ ಶಿರಹಟ್ಟಿ, ವಿನಯ ಮಾಳಗಿ, ರಮೇಶ ಸೊಂಟಕ್ಕಿ, ಪರಶುರಾಮ ಢಗೆ, ಸುರೇಶ ಕಿತ್ತೂರ, ಬಸಪ್ಪ ಹಜೇರಿ, ಲಕ್ಷ್ಮೀ ಕಲ್ಲೂರ, ದತ್ತಾ ಬಂಡಿಗೇಣಿ ಹಾಗೂ ಬನಶಂಕರಿ ಜಾತ್ರಾ ಮಹೋತ್ಸವದ ಕಮಿಟಿಯವರು ಉಪಸ್ಥಿತರಿದ್ದರು.

*ಯಾವ ತನಿಖೆ ಬೇಕಾದ್ರೂ ಎದುರಿಸಲು ಸಿದ್ಧ; ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarreactionramesh-jarakiholiamith-shah-meetcd-case/

*ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ವಿಚಾರ: ಡಿ.ಕೆ.ಶಿವಕುಮಾರ್ ಹೇಳಿದ್ದೇನು?*

https://pragati.taskdun.com/d-k-shivakumarkolarakudumale-ganapati-temple/

*ಅಮಿತ್ ಶಾ ಭೇಟಿಯಾದ್ರಾ ರಮೇಶ್ ಜಾರಕಿಹೊಳಿ?*

https://pragati.taskdun.com/ramesh-jarakiholiamit-shahmeetcd-case/

Related Articles

Back to top button