
ಪ್ರಗತಿವಾಹಿನಿ ಸುದ್ದಿ, ಉಡುಪಿ: ಚಿಪ್ಪು ಮೀನು ತೆಗೆಯಲು ರಾತ್ರಿ ವೇಳೆ ನದಿಗೆ ಇಳಿದಿದ್ದ ನಾಲ್ವರು ನೀರುಪಾಲಾಗಿದ್ದಾರೆ.
ಬ್ರಹ್ಮಾವರದ ಕುಕ್ಕುಡೆಯ ಕಿಣಿಯರ ಕುದ್ರು ಬಳಿ ಈ ದುರ್ಘಟನೆ ನಡೆದಿದೆ. ಈ ನಾಲ್ವರೂ ನಿನ್ನೆ ಸಂಜೆ ಕತ್ತಲಲ್ಲಿ ದೋಣಿಯಲ್ಲಿ ಕುಳಿತು ಚಿಪ್ಪು ಮೀನು ತೆಗೆಯಲು ಹೋಗಿದ್ದರು. ಈ ಪೈಕಿ ನಾಲ್ವರೂ ನದಿಯಲ್ಲಿ ತೇಲಿ ಹೋಗಿರುವುದು ತಿಳಿದುಬಂದಿದೆ.
ಉಡುಪಿ ಮತ್ತು ಶೃಂಗೇರಿ ಮೂಲದ ಈ ಯುವಕರು ರಂಜಾನ್ ಹಬ್ಬದ ಆಚರಣೆಗೆಂದು ಸಂಬಂಧಿಗಳ ಮನೆಗೆ ಆಗಮಿಸಿದ್ದರು. ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ದೋಣಿ ಮೂಲಕ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.