Karnataka News

*ಪ್ರೀತಿಸುವಂತೆ ಬಾಲಕಿ ಹಿಂದೆ ಬಿದ್ದು ಯುವಕನ ಕಿರುಕುಳ; ನೊಂದ ಅಪ್ರಾಪ್ತೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿ, ಕಿರುಕುಳ ಕೊಡುತ್ತಿದ್ದುದಕ್ಕೆ ಮನನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ ನಡೆದಿದೆ.

ಕಳೆದ ಹಲವು ದಿನಗಳಿಂದ ಸಂಗಮೇಶ್ ಎಂಬ ಯುವಕ ಅಪ್ರಾಪ್ತ ಬಾಲಕಿ ಹಿಇಂದೆ ಬಿದ್ದಿದ್ದ. ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಪ್ರಾಪ್ತೆ ಕಾಲೇಜಿಗೆ ಹೋಗುವಾಗಲೂ ಹಿಇಂದೆ ಬಂದು ಚುಡಾಯಿಸುತ್ತಿದ್ದ. ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ಪ್ರಶ್ನಿಸಿದ್ದ ಯುವತಿಯ ಸಹೋದರಿ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ಜೀವ ಬೆದರಿಕೆ ಹಾಕಿದ್ದ.

ಇದರಿಂದ ನೊಂದ ಅಪ್ರಾಪ್ತೆ ಮುದ್ದೇಬಿಹಾಳ ಠಾಣೆಯಲ್ಲಿ ನ.27ರಂದು ದೂರು ನೀಡಿದ್ದಳು. ಸಂಗಮೇಶ್, ಮೌನೇಶ್ ಮಾದರ, ಚಿದಾನಂದ ಕಟ್ಟಿಮನಿ ಎಂಬ ಮೂವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಯುವಕನ ಕಿರುಕುಳಕ್ಕೆ ನೊಂದ ಬಾಲಕಿ ಇದೀಗ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವಕನ ಕಿರುಕುಳಕ್ಕೇ ನೊಂದು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರನದದಿ ಮೂವರು ಯುವಕರನ್ನು ಬಂಧಿಸಲಾಗಿದೆ

Home add -Advt

Related Articles

Back to top button