ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯದ ಅಧೀನದಲ್ಲಿರುವ “ರಾಷ್ಟ್ರೀಯ ಸಂಸ್ಥೆಗಳ ಶ್ರೇಣೀಕರಣ ವಿಧಾನ ಸಂಸ್ಥೆ ( ಎನ್.ಐ ಆರ್. ಎಫ್)” ಇತ್ತೀಚಿಗೆ ಹೊರತಂದಿರುವ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಐ ಟಿ) ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಜಿಐಟಿ ೨೦೧ ರಿಂದ ೨೫೦ ರ ಬ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ. ದೇಶಾದ್ಯಂತ ೧೦೭೧ ಮತ್ತು ಕರ್ನಾಟಕದ ಸುಮಾರು ೧೦೦ ಎಂಜಿನಿಯರಿಂಗ್ ಸಂಸ್ಥೆಗಳು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.
ಈ ಶ್ರೇಣಿಯನ್ನು ಐದು ಗುಣಾತ್ಮಕ ಅಂಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಮಾಡಿದ ಸಾಧನೆಯನ್ನು ಗಮನಿಸಿ ನೀಡಲಾಗಿದೆ. ಈ ಅಂಶಗಳನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯದ ಮಾರ್ಗದರ್ಶನದಲ್ಲಿ ಎನ್. ಐ. ಆರ್. ಎಫ್ ರಚಿಸಿದ ಶಿಕ್ಷಣ ತಜ್ಞರ ತಂಡವು ಹಲವು ಮಾನದಂಡಗಳನ್ನು ಪರಿಗಣಿಸಿ ” ಕಲಿಕೆ, ಓದು ಮತ್ತು ಸಂಪನ್ಮೂಲ”, “ಸಂಶೋಧನೆ ಮತ್ತು ವೃತ್ತಿಪರ ಕಾರ್ಯಚಟುವಟಿಕೆಗಳು”, “ಮಹಾವಿದ್ಯಾಲಯದ ಫಲಿತಾಂಶ”, ಶಿಕ್ಷಣದ ಅಂತರ್ಗತೆ ಮತ್ತು ಸಮಾಜ ಹಾಗೂ ವಿದ್ಯಾರ್ಥಿಗಳ ಮೇಲೆ ಪ್ರಭಾವ” ಮತ್ತು ” ಸಾರ್ವಜನಿಕರ ಅಭಿಪ್ರಾಯ” ಈ ಗುಣಾತ್ಮಕ ಅಂಶಗಳ ಮೇಲೆ ಕೂಲಂಕಷವಾಗಿ ಪರಿಶೀಲಿಸಿ ಈ ಶ್ರೇಷ್ಠತಾ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ