Kannada NewsKarnataka NewsLatest

*ಇದೆಂತಹ ವಿಕೃತಿ… 4 ವರ್ಷದ ತನ್ನದೇ ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದ ತಾಯಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಗೋವಾದ ಹೋಟೆಲ್ ಒಂದರಲ್ಲಿ ಹೆತ್ತ ತಾಯಿಯೇ ತನ್ನ 4 ವರ್ಷದ ಮಗುವನ್ನು ಕೊಂದು ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ಸಾಗಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಗೋವಾದಿಂದ ಬೆಂಗಳೂರಿಗೆ ಮಗುವಿನ ಶವವನ್ನು ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐನಮಂಗಲ ಠಾಣೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಸ್ಟಾರ್ಟ್ ಅಪ್ ಫೌಂಡರ್ ಹಾಗೂ ಸಿಇಓ ಸುಚನಾ ಸೇಠ್ ಬಂಧಿತ ಆರೋಪಿ. ಸುಚನಾ ಸೇಠ್ ತನ್ನ ಸ್ವಂತ ಮಗುವನ್ನೇ ಕೊಲೆಗೈದು ಬಳಿಕ ಸೂಟ್ ಕೇಸ್ ನಲ್ಲಿ ರವನಾಸಿಲು ಮುಂದಾಗಿದ್ದಾಳೆ.

ಬೆಂಗಳೂರಿನಲ್ಲಿ ಸ್ಟಾರ್ಟಪ್ ಕಂಪನಿಯೊಂದರ ಫೌಂಡರ್ ಹಾಗೂ ಸಿಸಿಓ ಆಗಿದ್ದ ಸುಚನಾ ಸೇಠ್ ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಳು. ದಂಪತಿಗೆ 4 ವರ್ಷದ ಮಗನಿದ್ದ. ವಾರಕ್ಕೆ ಒಮ್ಮೆ ಮಗನನ್ನು ನೋಡಲು ಪತಿಗೆ ಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ಕರೆದುಕೊಂಡು ಸುಚನಾ ಗೋವಾದ ಹೋಟೆಲ್ ಗೆ ಹೋಗಿದ್ದಳು. ಹೋಟೆಲ್ ರೋಮ್ ನಲ್ಲಿಯೇ ಮಗುವನ್ನು ಸುಚನಾ ಕೊಲೆಗೈದಿದ್ದಾಳೆ ಎನ್ನಲಾಗಿದೆ. ಮತ್ತೆ ಮಗು ತನ್ನ ಮಾಜಿ ಪತಿಯನ್ನು ಭೇಟಿಯಾಗಬಾರದು ಎಂಬ ಕಾರಣಕ್ಕೆ ಮಗುವನ್ನೇ ಕೊಲೆಗೈದಿದ್ದಾಳೆ.

ಹೋಟೆಲ್ ರೂಮ್ ಖಾಲಿ ಮಾಡಿ ಸುಚನಾ ತನ್ನ ಸೂಟ್ ಕೇಸ್ ನೊಂದಿಗೆ ಟ್ಯಾಕ್ಸಿ ಯತ್ತ ಸಾಗಿದ್ದಳು. ಈ ವೇಳೆ ಹೋಟೆಲ್ ಸಿಬ್ಬಂದಿಗಳು ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಸುಚನಾ, ತಾನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದಾಗಿ ಹೇಳಿದ್ದಾಳೆ. ಆದರೆ ಹೋಟೆಲ್ ಸಿಬ್ಬಂದಿಗೆ ಅನುಮಾನವುಂಟಾಗಿದೆ. ಹೋಟೆಲ್ ರೂಂ ಖಾಲಿ ಮಾಡಿದ್ದರಿಂದ ಸಿಬ್ಬಂದಿಗಳು ರೂಂ ಸ್ವಚ್ಛ ಮಾಡಲು ಹೋಗಿದ್ದಾರೆ. ಈ ವೇಳೆ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ತಕ್ಷಣ ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಟ್ಯಾಕ್ಸಿ ಚಾಲಕನ ಮಾಹಿತಿ ಪಡೆದು ಕೂಡಲೇ ಆತನಿಗೆ ಕರೆ ಮಾಡಿ ಮಾರ್ಗದಲ್ಲಿರುವ ಪೊಲೀಸ್ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸುವಂತೆ ಹೇಳಿದ್ದಾರೆ. ಪೊಲೀಸರ ಸೂಚನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಐನಮಂಗಲ ಪೊಲೀಸ್ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ ಚಾಲಕ ಟ್ಯಾಕ್ಸಿಯಲ್ಲಿದ್ದ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

ಮಹಿಳೆ ಸುಚನಾಳನ್ನು ವಶಕ್ಕೆ ಪಡೆದ ಪೊಲೀಸರು ಕಾರಿನ ಡಿಕ್ಕಿಯಲ್ಲಿದ್ದ ಆಕೆಯ ಸೂಟ್ ಕೇಸ್ ಪರಿಶೀಲಿಸಿದ್ದಾರೆ. ಈ ವೇಳೆ ಸೂಟ್ ಕೇಸ್ ನಲ್ಲಿ 4 ವರ್ಷದ ಮಗುವಿನ ಶವ ಕಂಡು ಶಾಕ್ ಆಗಿದ್ದಾರೆ. ಗೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button