Kannada NewsLatestNational
*ಭೀಕರ ಅಪಘಾತ; ಇಬ್ಬರು ಪೊಲೀಸ್ ಅಧಿಕಾರಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ಸೋನಿಪತ್ ಗಡಿ ಬಳಿ ನಡೆದಿದೆ.
ದಿನೇಶ್ ಬೇನಿವಾಲ್ ಹಾಗೂ ರಣವೀರ್ ಮೃತ ಇನ್ಸ್ ಪೆಕ್ಟರ್ ಗಳು. ದಿನೇಶ್ ಬೇನಿವಾಲ್ ವಾಯುವ್ಯ ಜಿಲ್ಲಾ ವಿಶೇಷ ಸಿಬ್ಬಂದಿಯಲ್ಲಿ ನಿಯೋಜನೆಗೊಂಡಿದ್ದರು. ರಣವೀರ್ ಎಟಿಒ ಇನ್ಸ್ ಪೆಕ್ಟರ್ ಆಗಿದ್ದರು. ತಡರಾತ್ರಿ ಇಬ್ಬರೂ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಾರು ಹಾಗೂ ಟ್ರಕ್ ನಡುವೆ ಡಿಕ್ಕಿಯಾಗಿ ಇಬ್ಬರೂ ಕಾರಿನಲ್ಲೇ ಸಿಲುಕಿ ಹೊರಬರಲಾಗದೇ ಸಾವನ್ನಪ್ಪಿದ್ದಾರೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.




