
ಆರೋಪಿ ಅರೆಸ್ಟ್; ಅಪಾರ ಮದ್ಯ ವಶಕ್ಕೆ
ಪ್ರಗತಿವಾಹಿನಿ ಸುದ್ದಿ: ಗೋವಾ ಮದ್ಯವನ್ನು ಅಕ್ರಮಾವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿ ನಗರ ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಂಧಿತ ಆರೋಪಿ ಸುಭಾಷ ಸುದೀರ ಡೇ ( 46) ಎಂದು ಗುರುತಿಸಲಾಗಿದೆ. ಬೆಳಗವೈಯ ಮಹಾದ್ವಾರ ರೋಡ್ ನಿವಾಸಿ.
ಈತ ಗೋವಾ ರಾಜ್ಯದ ಮದ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ ಬೆಳಗಾವಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬೆಳಗಾವಿ ಶಹಾಪೂರ ಹುಲಬತ್ತಿ ಕಾಲನಿ 1ನೇ ಕ್ರಾಸ್ ಪ್ಲಾಟ ನಂ 5302 ನೇದ್ದರ ತನ್ನ ಸಂಬಂಧಿಕರ ಮನೆಯಲ್ಲಿ ಯಾವುದೇ ಲೈಸನ್ಸ್, ಪರಮೀಟ್ ಇಲ್ಲದೇ ಅಕ್ರಮವಾಗಿ ದಾಸ್ತಾನು ಮಾಡಿದ್ದ. ಖಚಿತಿ ಮಾಹಿತಿ ಆಧರಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಶಹಾಪುರ ಠಾಣೆ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಕ್ರಮವಾಗಿ ದಾಸ್ತಾನು ಮಾಡಿದ್ದ ಗೋವಾ ರಾಜ್ಯದ 1,37,681 ರೂ ಮೌಲ್ಯದ ವಿವಿಧ ಕಂಪನಿಯ 313.3 ಲೀಟರ್ ಮಧ್ಯವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನ ವಿರುದ್ಧ ಶಹಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 41/2025 ಕಲಂ: 32. 34 ಕರ್ನಾಟಕ ಅಬಕಾರಿ ಕಾಯ್ದೆ. ಪ್ರಕರಣ ದಾಖಲಿಸಲಾಗಿದೆ.
ನಿರಂಜನ ರಾಜ್ ಅರಸ್- ಕೆಎಸ್‌ಪಿಎಸ್. ಮಾನ್ಯ ಉಪ-ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ಬೆಳಗಾವಿ ನಗರ, ಸಂತೋಷ ಸತ್ಯನಾಯಕ ಸಹಾಯಕ ಪೊಲೀಸ್ ಆಯುಕ್ತರು ಮಾರ್ಕೆಟ ಉಪ-ವಿಭಾಗ ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ರವರಾದ ಎಸ್ ಎಸ್ ಸಿಮಾನಿ ಇವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ದಾಳಿ ತಂಡದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ಎಸ್ ಸಿಮಾನಿ, ಸಿಹೆಚ್‌ಸಿ ನಾಗರಾಜ ಓಸಪ್ಪಗೋಳ, ಸಂದೀಪ ಬಾಗಡಿ, ಜಗದೀಶ ಹಾದಿಮನಿ, ಶ್ರೀಧರ ತಳವಾರ, ಶ್ರೀಶೈಲ್ ಗೋಖಾವಿ, ಸುರೇಶ ಲೋಕುರೆ, ಅಜೀತ ಶಿಪೂರೆ, ಸಿದ್ದರಾಮೇಶ್ವರ ಮುಗಳಖೋಡ, ವಿಜಯ ಕಮತೆ ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.