
ಪ್ರಗತಿವಾಹಿನಿ ಸುದ್ದಿ: ಭಜನಾ ಕಾರ್ಯಕ್ರಮ ಮುಗಿಸಿ ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರನ್ನುಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ನಡೆದಿದೆ.
ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಕೊಲೆಯಾದ ವ್ಯಕ್ತಿ. ಮಡ್ಡೆಪ್ಪ ನಿನ್ನೆ ರಾತ್ರಿ ಬೀರ ಸಿದ್ದೇಶ್ವರ ಗುಡಿಯಲ್ಲಿ ನಡೆದ ಭಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಗುಡಿಯ ಕಟ್ಟೆಯ ಮೇಲೆ ಮಲಗಿದ್ದರು. ಬೀರಪ್ಪ ಸಿದ್ದಪ್ಪ ಸೊನದೊಳಿ ಎಂಬಾತ ಕಬ್ಬು ಕಡಿಯುವ ಕೊಯ್ತಾದಿಂದ ಮಡ್ಡಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ರಕ್ತದ ಮಡುವಲ್ಲಿ ಬಿದ್ದಿದ್ದ ಮಡ್ಡಪ್ಪನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರು.
ಹೊಲದ ವಿಚಾರವಾಗಿ ಮಡ್ಡೆಪ್ಪ ಹಾಗೂ ಬೀರಪ್ಪ ನಡುವೆ ಜಗಳವಾಗಿತ್ತು. ಇದೇ ವಿಚಾರವಾಗಿ ಬೀರಪ್ಪ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗೋಗಾಕ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ