Latest

ಪರ್ತಗಾಳಿ ಜೀವೊತ್ತಮ ಮಠಾಧೀಶರಾದ ವಿದ್ಯಾಧಿರಾಜ ತೀರ್ಥ ಶ್ರೀಪಾದರು ವಿಧಿವಶ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶರಾದ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಇಂದು ಮುಂಜಾನೆ ಗೋವಾದ ಮಠದಲ್ಲಿ ವಿಧಿವಶರಾಗಿದ್ದಾರೆ.

ಶ್ರೀಗಳ ಪೂರ್ವಾಶ್ರಮ ಕುಂದಾಪುರ ತಾಲೂಕಿನ ಗಂಗೊಳ್ಳಿ. 1967ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. 2016ರಲ್ಲಿ ಶ್ರೀಗಳ ಸುವರ್ಣ ಚಾತುರ್ಮಾಸ ಆಚರಣೆ ನಡೆದಿತ್ತು.

ಗಂಗೊಳ್ಳಿ ಮಲ್ಯರಮಠ ಸಹಿತ ಜಿ ಎಸ್ ಬಿ ಸಮಾಜದ ಹಲವು ದೇಗುಲಗಳ ಪುನುರುತ್ಥಾನದಲ್ಲಿ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಕೈಜೋಡಿಸಿದ್ದರು. ಎಂದಿನಂತೆ ಇಂದು ಕೂಡ ಅನುಷ್ಠಾನ, ಪೂಜೆಗಳನ್ನು ನೆರವಿರಿಸಿ ವಿಶ್ರಾಂತಿಗೆ ತೆರಳಿದ್ದ ವೇಳೆ ಹರಿಪಾದ ಸೇರಿದ್ದಾರೆ.
ಬದಲಾವಣೆ ವಾಣಿಗಾಗಿ ಕಾಯುತ್ತಿದ್ದೇವೆ ಎಂದ ಸತೀಶ್ ಜಾರಕಿಹೊಳಿ

Home add -Advt

Related Articles

Back to top button