
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪೌರ ಕಾರ್ಮಿಕರಿಗೆ ಕಸ ಸಂಗ್ರಹಿಸುವ ವೇಳೆ ಕಸದ ರಾಶಿಯಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆ ಬಳಿ ನಡೆದಿದೆ.
ದಿನನಿತ್ಯದಂತೆ ಅಥಣಿಯ ಎಂ.ಜಿ.ಮಾರ್ಕೆಟ್ ನಲ್ಲಿ ಪೌರ ಕಾರ್ಮಿಕ ಮಾರುತಿ ಭಜಂತ್ರಿ ಹಾಗೂ ವಾಹನ ಚಾಲಕ ಬಸವರಾಜ ಕೋರಿ ಕಸ ಸಂಗ್ರಹಿಸಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿದ್ದ ಕಸ ವಿಲೇವಾರಿ ಮಾಡುತ್ತಿದ್ದರು. ಈ ವೇಳೆ ಕಸದ ರಾಶಿಯಲ್ಲಿ ಬಂಗಾರದ ಮಾಂಗಲ್ಯ ಸರವೊಂದು ಪತ್ತೆಯಾಗಿದೆ.
ಮಾರುಕಟ್ಟೆ ಬಳಿ ಮೊದಲು ಕಸ ಸಂಗ್ರಹ ಮಾಡುತ್ತಿದ್ದ ವೇಳೆ ಚಿನ್ನದ ಅಂಗಡಿಯ ಮಾಲೀಕರೊಬ್ಬರು ಕಾಗದದಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಮಾಂಗಲ್ಯ ಸರವೊಂದು ಕಸದ ಡಬ್ಬಿಗೆ ಹೋಗಿರುವ ಸಾಧ್ಯತೆ ಇದೆ. ಸ್ವಲ್ಪ ಹುಡುಕಿಕೊಡುತ್ತೀರಾ ಎಂದು ಪೌರ ಕಾರ್ಮಿಕರಿಗೆ ಹೇಳಿದ್ದರಂತೆ. ಎರಡನೇ ಬಾರಿ ಕಸ ವಿಲೇವಾರಿಗೆ ಹೋಗಿದ್ದಾಗ ಪೌರ ಕಾರ್ಮಿಕರು ಕಸದಲ್ಲಿ ಹುಡುಕಿದಾಗ ಚಿನ್ನದ ಸರ ಸಿಕ್ಕಿದೆ. ಈ ಬಗ್ಗೆ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ ಪೌರ ಕಾರ್ಮಿಕ ಮಾರುತಿ ಹಾಗೂ ಬಸವರಾಜ್, ಅದನ್ನು ಮರಳಿ ಅಂಗಡಿ ಮಾಲೀಕರಿಗೆ ಕೊಟ್ಟಿದ್ದಾರೆ. ಪೌರ ಕಾರ್ಮಿಕರ ಪ್ರಾಮಾಣಿಕತೆಗೆ ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಕಾಂಬಳೆ, ಪಟ್ಟಣದ ವ್ಯಾಪಾರಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಂಡೆಮಠದಶ್ರೀ ಆತ್ಮಹತ್ಯೆ ಕೇಸ್; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
https://pragati.taskdun.com/latest/bandemathashreesuicide-case3-accussedjudicial-custody/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ