
ಪ್ರಗತಿವಾಹಿನಿ ಸುದ್ದಿ; ಮುಂಬೈ: ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ದರದಲ್ಲಿ 2500 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 44,350 ರೂಪಾಯಿ ಇದ್ದು, 24 ಕ್ಯಾರೆಟ್ ಚಿನ್ನದ ದರ 10 ಗ್ರಾಮ್ ಗೆ 48,380 ರೂಪಾಯಿಗಳಿವೆ.
ಚಿನ್ನದ ದರದಲ್ಲಿ ಶೇ.0.86ರಷ್ಟು ಕಡಿಮೆಯಾಗಿದ್ದರೆ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡಿದೆ. ಕೆ.ಜಿ ಬೆಳ್ಳಿ ದರ 6500 ರೂಯಿ ಕಡಿಮೆಯಾಗಿದೆ.