Kannada NewsLatest

ಬೆಳಗಾವಿಯಲ್ಲಿ ವಕೀಲರ ಪ್ರತಿಭಟನೆ; ಸಿಪಿಐ ವಿರುದ್ಧ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದ ವಕೀಲರನ್ನು ಸಿಪಿಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಕೋರ್ಟ್ ಬಳಿ ಬ್ಯಾರಿಕೇಡ್ ಗಳನ್ನು ಹಾಕಿ, ರಸ್ತೆ ತಡೆ ನಡೆಸಿ ಸಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Home add -Advt

ಕಕ್ಷಿದಾರರೊಬ್ಬರ ಪರ ದೂರು ದಾಖಲಿಸಲೆಂದು ಠಾಣೆಗೆ ಹೋಗಿದ್ದ ವಕೀಲ ಚೇತನ ಈರಣ್ಣ ಗೆ ಸಿಪಿಐ ಸುನೀಲ ಪಾಟೀಲ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ವಕೀಲರಿಗೆ ಗೌರವ ನೀಡದ ಸಿಪಿಐ ನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Related Articles

Back to top button