ಮೂರು ದಿನ ಏರಿಕೆ ಕಂಡ ಚಿನ್ನ: ಇಂದಿನ ಬೆಲೆ ಎಷ್ಟಿದೆ..?
ಪ್ರಗತಿವಾಹಿನಿ ಸುದ್ದಿ: ಹೂಡಿಕೆ ಮಾಡಿದವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ. ಆದರೆ ಸಾಮಾನ್ಯವಾಗಿ ಆಭರಣ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸ. ಚಿನ್ನದ ಬೆಲೆ ಕಳೆದ ಕೆಲವು ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುತ್ತದೆ ಎಂದು ಹೇಳಲಾಗುತ್ತಿದೆ.
ಆಭರಣವನ್ನು ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿ ಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಚಿನ್ನದ ಬೆಲೆ ಏರಿಕೆಯನ್ನು ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿ ಪ್ರತಿ 100 ಗ್ರಾಂಗೆ 10,400 ರೂಪಾಯಿ ಜಾಸ್ತಿ ಆಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,16,200 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ.
ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂ 71,620 ರೂಪಾಯಿಗೆ ಏರಿಕೆ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಪ್ರತಿ 100 ಗ್ರಾಂಗೆ 9,500 ರೂಪಾಯಿ ಏರಿಕೆ ಕಂಡಿದೆ. ಹೀಗೆ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,56,500 ರೂಪಾಯಿ ಆಗಿದೆ ಇದರ ಜೊತೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 65,650 ರೂಪಾಯಿ ತಲುಪಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ