Latest

ಭಾವಿ ಪತಿಯನ್ನೇ ಕೊಂದ ಯುವತಿ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ವಿವಾಹಕ್ಕೆ ಸಿದ್ಧವಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಭಾವಿ ಪತಿಯನ್ನು ಬರ್ಬರವಾಗಿ ಹತ್ಯೆಗೈದು, ಹೊಲದಲ್ಲಿ ಹೂತಿಟ್ಟ ಘಟನೆರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ.

ಸಿರಿವಾರ ಪಟ್ಟಣದ ನಿವಾಸಿ ಮಹಬೂಬ್ ಜೊತೆ ಖಾಜಾಬಿ ಎಂಬ ಯುವತಿಯ ವಿವಾಹ ನಿಶ್ಚಯವಾಗಿತ್ತು. ಆದರೆ ಯುವತಿ ಶಬ್ಬೀರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮಹಬೂಬ್ ಜೊತೆ ವಿವಾಹವಾದರೆ ಪ್ರೀತಿಗೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಶಬ್ಬೀರ್ ಜೊತೆ ಸೇರಿ ಖಾಜಾಬಿ, ಮಹಬೂಬ್ ನನ್ನು ಹತ್ಯೆಗೈದು ಹೊಲದಲ್ಲಿ ಹೂತಿಟ್ಟುದ್ದಳು.

Home add -Advt

ಕೃತ್ಯದ ಬಳಿಕ ಖಾಜಾಬಿ ಹಾಗೂ ಶಬ್ಬೀರ್ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಖಾಜಾಬಿ ಹಾಗೂ ಶಬ್ಬೀರ್ ಇಬ್ಬರನ್ನೂ ಬಂಧಿಸಿದ್ದಾರೆ.

Related Articles

Back to top button