Karnataka NewsPolitics

*ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1 ಲಕ್ಷಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ : ಕರ್ನಾಟಕ ಸಂಭ್ರಮ 50 ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಈಗಾಗಲೇ ಘೋಷಣೆ ಮಾಡಿದ್ದು, ಪ್ರಶಸ್ತಿ ಮೊತ್ತವನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

50 ಮಹಿಳಾ ಸಾಧಕಿಯರು ಹಾಗೂ 50 ಪುರುಷ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಹಿಂದೆ ಪ್ರಶಸ್ತಿ ಮೊತ್ತವನ್ನು 50,000 ಎಂದು ತಿಳಿಸಲಾಗಿತ್ತು.

Home add -Advt

ಇದೊಂದು ಐತಿಹಾಸಿಕ ಸಂದರ್ಭ ವಾಗಿರುವುದರಿಂದ ಈ ಪ್ರಶಸ್ತಿ ಮೊತ್ತವನ್ನು 50 ಸಾವಿರದಿಂದ ರೂ.1 ಲಕ್ಷಗಳಿಗೆ ಹೆಚ್ಚಿಸುವುದು ಸೂಕ್ತವೆಂದು ಸರ್ಕಾರ ಅಭಿಪ್ರಾಯ ಪಟ್ಟಿರುವುದರಿಂದ ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಘೋಷಿಸಿದ್ದಾರೆ.

Related Articles

Back to top button