ಪ್ರಗತಿವಾಹಿನಿ ಸುದ್ದಿ; ರಷ್ಯಾ: ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ್ದ ಟ್ರಾಫಿಕ್ ಪೊಲೀಸನೋರ್ವನ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳಿಗೆ ಅಲ್ಲಿನ ಚಿನ್ನದ ಟಾಯ್ಲೆಟ್, ಅಪಾರ ಸಂಪತ್ತು ಕಂಡು ದಂಗಾದ ಘಟನೆ ರಷ್ಯಾದ ದಕ್ಷಿಣ ಸ್ಟಾವ್ರೊಪೊಲ್ ನಲ್ಲಿ ನಡೆದಿದೆ.
ಸಂಚಾರಿ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಫೋನೊವ್ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದಿತ್ತು. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲೆಕ್ಸಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮನೆಯಲ್ಲಿನ ಐಷಾರಾಮಿ ವ್ಯವಸ್ಥೆ ಕಂಡು ತನಿಖಾಧಿಕಾರಿಗಳೇ ಬೆರಗಾಗಿದ್ದಾರೆ.
ಐಷಾರಾಮಿ ಬಂಗಲೆಯಲ್ಲಿ ಚಿನ್ನದ ಶೌಚಾಲಯ, ದುಬಾರಿ ಅಲಂಕಾರಿಕ ವಸ್ತು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಟ್ರಾಫಿಕ್ ಪೊಲೀಸ್ ಕರ್ನಲ್ ಅಲೆಕ್ಸಿ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ