Latest

ಬಂಗಾರದ ಬೆಲೆ ಮತ್ತಷ್ಟು ಕುಸಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ದಿನಗಳಿಂದ ಕುಸಿತ ಕಂಡಿದ್ದ ಚಿನ್ನಾಭರಣಗಳ ಬೆಲೆ ಇಂದು ಮತ್ತಷ್ಟು ಇಳಿಕೆಯಾಗಿದೆ. ಬಂಗಾರ ಕೊಳ್ಳಲು ಪ್ಲಾನ್ ಮಾಡಿದ್ದರೆ ಇಂದಿನ ಚಿನ್ನ, ಬೆಳ್ಳಿ ದರದ ಬಗ್ಗೆ ತಿಳಿಯಲೇಬೇಕು.

ದೇಶದಲ್ಲಿ 10ಗ್ರಾಂ ಚಿನ್ನದ ದರ ಇಂದು 200 ರೂಪಾಯಿ ಕುಸಿತಗೊಂಡಿದೆ. ಭಾರತದಲ್ಲಿ ಇಂದು 22ಕ್ಯಾರಟ್ 10ಗ್ರಾಂ ಚಿನ್ನ 47,800 ರೂ ಆಗಿದೆ. 24 ಕ್ಯಾರಟ್ ಚಿನ್ನದ ದರ 52,140ರೂ ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ47,800 ರೂ ಆಗಿದೆ. 24 ಕ್ಯಾರೆಟ್ ಚಿನ್ನ 52,140 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,030 ರೂ. ಮುಂಬೈ- 47,800 ರೂ, ದೆಹಲಿ- 47,800 ರೂ, ಕೊಲ್ಕತ್ತಾ- 47,800 ರೂ, ಹೈದರಾಬಾದ್- 47,800 ರೂ, ಪುಣೆ- 47,880 ರೂ, ಮಂಗಳೂರು- 47,800 ರೂ ಇದೆ.

Home add -Advt

24 ಕ್ಯಾರೆಟ್ ಚಿನ್ನ ಚೆನ್ನೈ- 52,400 ರೂ, ಮುಂಬೈ- 52,140 ರೂ, ದೆಹಲಿ- 52,140 ರೂ, ಹೈದರಾಬಾದ್- 52,140 ರೂ, ಪುಣೆ- 52,190 ರೂ, ಮಂಗಳೂರು- 52,140 ರೂ ಇದೆ.

ಇಂದು ಬೆಳ್ಳಿ ದರ ಗಮನಿಸುವುದಾದರೆ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,400 ರೂ ಇದೆ. ದೆಹಲಿ, ಮುಂಬೈನಲ್ಲಿ 66,600 ರೂ ಇದ್ದರೆ ಚನ್ನೈನಲ್ಲಿ 71,400 ರೂ ನಿಗದಿಯಾಗಿದೆ.

Related Articles

Back to top button