ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ದಿನಗಳಿಂದ ಕುಸಿತಕಂಡಿದ್ದ ಚಿನ್ನಾಭರಣಗಳ ಬೆಲೆ ಇಂದು ಕೊಂಚ ಏರಿಕೆಯಾಗಿದೆ. ಚಿನ್ನ ಕೊಳ್ಳಲು ಪ್ಲಾನ್ ಮಾಡಿದ್ದರೆ ಇಂದಿನ ದರ ಎಷ್ಟಿದೆ ಎಂಬುದನ್ನು ಗಮನಿಸಲೇಬೇಕು.
ಚಿನ್ನ ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತೆ ಎಂದೇ ಹೇಳಲಾಗುತ್ತದೆ. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವಾಗಿ ಪರಿಗಣಿಸುತ್ತಾರೆ. ಅಲ್ಲದೇ ಒಂದು ಸುರಕ್ಷಿತ ಹೂಡಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಹತ್ವದ್ದಾಗಿರುತ್ತದೆ.
ಚಿನ್ನ ಬೆಳ್ಳಿ ದರದಲ್ಲಿ ಇಂದು ಏರಿಕೆಯಾಗಿದ್ದು, ದೇಶದಲ್ಲಿ 22 ಕ್ಯಾರೆಟ್ 10ಗ್ರಾ ಚಿನ್ನ ಇಂದು 47,400 ರೂ ಆಗಿದೆ. 24 ಕ್ಯಾರೆಟ್ ಚಿನ್ನ 51,700 ರೂ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನದ ದರ 47,400 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 51,710 ರೂ ಇದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,520 ರೂ. ದೆಹಲಿ- 47,100 ರೂ, ಹೈದರಾಬಾದ್- 47,410 ರೂ, ಪುಣೆ – 47,480 ರೂ ಆಗಿದೆ. ಮೈಸೂರು 47,400 ರೂ ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,930 ರೂ, ದೆಹಲಿ- 51,380 ರೂ, ಕೊಲ್ಕತ್ತಾ- 51,700 ರೂ, ಹೈದರಾಬಾದ್- 51,710 ರೂ, ಪುಣೆ- 51,780 ರೂ.ಆಗಿದೆ. ಮೈಸೂರು-51,510 ರೂ ಆಗಿದೆ.
ಇಂದು ಭಾರತದಲ್ಲಿ ಬೆಳ್ಳಿದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 67,700 ರೂ ಆಗಿದೆ. ದೆಹಲಿಯಲ್ಲಿ 62,300 ಮುಂಬೈ 62,300 ರೂ, ಮಂಗಳೂರು 66,500 ರೂ ಇದೆ.
ಪೊಲೀಸ್ ಅಧಿಕಾರಿಯನ್ನು ಬಾಯಿಗೆ ಬಂದಂತೆ ಬೈದು ಆವಾಜ್ ಹಾಕಿದ ಬಿಜೆಪಿ ಶಾಸಕ ಕುಮಾರಸ್ವಾಮಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ