Latest

ಪೊಲೀಸ್ ಅಧಿಕಾರಿಯನ್ನು ಬಾಯಿಗೆ ಬಂದಂತೆ ಬೈದು ಆವಾಜ್ ಹಾಕಿದ ಬಿಜೆಪಿ ಶಾಸಕ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಪೊಲಿಸ್ ಅಧಿಕಾರಿಯೋರ್ವರಿಗೆ ಚಿಕ್ಕಮಗಳೂರಿನ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ಬೈದು ಆವಾಜ್ ಹಾಕಿರುವ ಆಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ವಹಿಸಿಕೊಂಡಿದ್ದ ರವೀಶ್ ಅವರನ್ನು ಇಲ್ಲಿಗೆ ಬರಬೇಡ ಎಂದಿದ್ದೆ. ಆದರೂ ಬಂದಿದ್ದೀಯಾ. ಸ್ಟೇಷನ್ ನಲ್ಲಿ ಇರ್ಬೇಡ ಮರ್ಯಾದೆಯಿಂದ ಬಂದ ದಾರಿಗೆ ವಾಪಸ್ ಹೋಗು ಎಂದು ಶಾಸಕರು ಹಿಗ್ಗಾ ಮುಗ್ಗಾ ಬೈದಿದ್ದಾರೆ.

Home add -Advt

ಐಜಿ ಸೂಚನೆಯಂತೆ ಚಾರ್ಜ್ ತೆಗೆದುಕೊಂಡಿದ್ದೇನೆ. ನಾಳೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ. ಐಜಿಪಿಗೆ ಎಷ್ಟು ಲಂಚಕೊಟ್ಟೆ? ಯಾವನು ಐಜಿಪಿ? ಮೂಡಿಗೆರೆಗೆ ಎಲ್ಲಾ ನಾನೇ. ನನ್ನ ನೋಡಲು ಬಂದರೆ ಒದ್ದು ಓಡಿಸ್ತೀನಿ ಇಲ್ಲೆ ಇದ್ದರೆ ನಾನೇ ಸಸ್ಪೆಂಡ್ ಮಾಡಿಸ್ತೇನೆ ಎಂದು ಕಿಡಿಕಾರಿದ್ದಾರೆ.

ಶಾಸಕರ ಆವಾಜ್ ಆಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Back to top button