ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಬಜೆಟ್ ನಲ್ಲಿ ಘೋಷಣೆಯಾಗಲಿದೆ ಎನ್ನುವ ಬಹು ನಿರೀಕ್ಷೆ ಪ್ರಸ್ತುತ ಬಜೆಟ್ ನಲ್ಲಿ ಈಡೇರಲಿಲ್ಲ. ಇದರಿಂದಾಗಿ ಸರಕಾರಿ ನೌಕರರಿಗೆ ಬೇಸರವಾಗಿದೆ.
ಆದರೆ ಸರಕಾರಿ ನೌಕರರಿಗೆ ಖುಷಿ ನೀಡುವ ಸುದ್ದಿ ಇಲ್ಲಿದೆ. 7ನೇ ವೇತನ ಆಯೋಗದ ವರದಿ ಜಾರಿಯಾಗದ ಕುರಿತು ಪತ್ರಕರ್ತರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. 7ನೇ ವೇತನ ಆಯೋಗದ ವರದಿ ಜಾರಿಯಾಗಲಿದೆ ಎನ್ನುವ ನಿರೀಕ್ಷೆ ಇತ್ತು. ನೀವು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ರಿ. ಆದರೆ ಜಾರಿಯಾಗಿಲ್ವಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಅವರು ನೀಡಿದ ಉತ್ತರ – “ಬಜೆಟ್ ಗೆ ಉತ್ತರಿಸುವ ಸಂದರ್ಭದಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಘೋಷಣೆಯಾಗಲಿದೆ. ನೂರಕ್ಕೆ ನೂರು ಖಚಿತ. ಅದನ್ನು ಮಾಡಿಸಿಯೇ ಮಾಡಿಸುತ್ತೇನೆ”
ಇದರಿಂದಾಗಿ ಸರಕಾರಿ ನೌಕರರ ಆಸೆ ಮತ್ತೆ ಚಿಗುರಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ಮೊದಲಬಾರಿಗೆ ಹಲವು ಯೋಜನೆಗಳ ಘೋಷಣೆ ; ಶೈಕ್ಷಣಿಕ ಕ್ಷೇತ್ರಕ್ಕೆ ಸಿಕ್ಕಿದ್ದೇನು ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ