Kannada NewsKarnataka NewsLatest

Good News: ಲಂಡನ್ ನಿಂದ ಬೆಳಗಾವಿಗೆ ಬಂದ ಮಹಿಳೆಯ ವರದಿ‌ ನೆಗೆಟಿವ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬ್ರಿಟನ್ ನಿಂದ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಮಹಿಳೆಯ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.
ಇದರಿಂದಾಗಿ ಬೆಳಗಾವಿಯ ಜನರು ನಿಟ್ಟುಸಿರುವ ಬಿಡುವಂತಾಗಿದೆ.

ನಿನ್ನೆ ಲಂಡನ್ ನಿಂದ 35 ವರ್ಷದ ಮಹಿಳೆಯೋರ್ವಳು ಬೆಳಗಾವಿಗೆ ಆಗಮಿಸಿದ್ದು, ಆಕೆಯನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು.

ಲಂಡನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಹಿಳೆ ಅಲ್ಲಿಂದ ವಿಮಾನದ ಮೂಲಕವೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ನಂತರ ಖಡೇಬಜಾರದಲ್ಲಿರುವ ತನ್ನ ಮನೆಗೆ ತೆರಳಿದ್ದಳು.

Home add -Advt

ಮಾಹಿತಿ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಹಿಳೆಯ ಮನೆಗೆ ತೆರಳಿ ಪರೀಕ್ಷೆ ನಡೆಸಿದ್ದರು. ಜೊತೆಗೆ ಆಕೆ ಮತ್ತು ಆಕೆಯ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿದ್ದರು.

ಇದೀಗ ಆಕೆಯ ಕೊರೋನಾ ಪರೀಕ್ಷಾ ವರದಿ ಬಂದಿದ್ದು ನೆಗೆಟಿವ್ ಬಂದಿದೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ –

Related Articles

Back to top button